ಸಾನಿಯಾ ಮಿರ್ಜಾ-ಶೊಯೇಬ್ ದಾಂಪತ್ಯದಲ್ಲಿ ಬಿರುಕು?

ಸೋಮವಾರ, 7 ನವೆಂಬರ್ 2022 (20:31 IST)
ಹೈದರಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ? ಹೀಗೊಂದು ಸುದ್ದಿ ಈಗ ದಟ್ಟವಾಗಿದೆ.

ಸಾನಿಯಾ ಮತ್ತು ಶೊಯೇಬ್ 2010 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರೂ ದುಬೈನಲ್ಲಿ ಮನೆ ಮಾಡಿಕೊಂಡಿದ್ದಾರೆ. ಆದರೆ ಈಗಲೂ ಸಾನಿಯಾ ಹೆಚ್ಚಾಗಿ ಪೋಷಕರ ಜೊತೆ ಹೈದರಾಬಾದ್ ನಲ್ಲಿರುತ್ತಾರೆ.

ಆದರೆ ಈಗ ಶೊಯೇಬ್ ಬೇರೊಬ್ಬ ಯುವತಿಯೊಂದಿಗೆ ಸಂಬಂಧ ಹೊಂದಿದ್ದು, ಆ ವಿಚಾರ ಗೊತ್ತಾಗಿ ಸಾನಿಯಾ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿ ಹರಡಿದೆ. ಇತ್ತೀಚೆಗೆ ಶೊಯೇಬ್ ತಮ್ಮ ಪುತ್ರ ಇಝಾನ್ ಬರ್ತ್ ಡೇ ಪಾರ್ಟಿ ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ ಆ ಫೋಟೋಗಳನ್ನು ಸಾನಿಯಾ ಹಂಚಿಕೊಂಡಿರಲಿಲ್ಲ. ಸಾನಿಯಾ ಇದೀಗ ಪುತ್ರ ಇಝಾನ್ ಜೊತೆಗಿರುವ ಫೋಟೋ ಹಂಚಿಕೊಂಡು ಕಷ್ಟದ ಸಮಯದಿಂದ ಹೊರಬರುವುದು ನಾನು ಹೀಗೆ ಎಂದು ಬರೆದುಕೊಂಡಿದ್ದರು. ಇದೆಲ್ಲಾ ದಂಪತಿ ಬೇರೆಯಾಗುತ್ತಿರುವ ಸೂಚನೆ ಎನ್ನಲಾಗಿದೆ.


-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ