ಫೈನಲ್ ತಲುಪಿಸಿದ ಅಶ್ವಿನ್ ರನ್ನೇ ಹೊರಗಿಟ್ಟಿದ್ದು ಸರೀನಾ?!

ಗುರುವಾರ, 8 ಜೂನ್ 2023 (08:20 IST)
Photo Courtesy: Twitter
ದಿ ಓವಲ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಿಂದ ಹಿರಿಯ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ರನ್ನು ಹೊರಗಿಟ್ಟಿರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ರವಿಚಂದ್ರನ್ ಅಶ್ವಿನ್ ಭಾರತ ತಂಡ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಾಂಗ್ಲಾ ವಿರುದ್ಧ ಟೆಸ್ಟ್ ಪಂದ್ಯ ಸೋಲುವ ಹಂತದಲ್ಲಿದ್ದಾಗ ಬ್ಯಾಟಿಂಗ್ ಮಾಡಿ ಗೆಲ್ಲಿಸಿದ್ದರು. ಹಲವು ಬಾರಿ ಅಶ್ವಿನ್ ಈ ರೀತಿ ಆಪತ್ ಬಾಂಧವನ ಪಾತ್ರ ಮಾಡಿದ್ದಾರೆ.

ಆದರೆ ಈಗ ಫೈನಲ್ ವರೆಗೆ ತಲುಪಿದ ಮೇಲೆ ಫೈನಲ್ ತಲುಪಿಸಿದ ವ್ಯಕ್ತಿಯನ್ನೇ ಹೊರಗಿಟ್ಟಿದ್ದು ಸರಿಯಾ ಎಂದು ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ