ಡಬ್ಲ್ಯುಟಿಸಿ ಫೈನಲ್: ಮೊದಲ ದಿನ ಮಂಕಾದ ಟೀಂ ಇಂಡಿಯಾ ಬೌಲರ್ ಗಳು

ಗುರುವಾರ, 8 ಜೂನ್ 2023 (08:10 IST)
ದಿ ಓವಲ್: ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಆಸೀಸ್ ಅಬ್ಬರದ ಬ್ಯಾಟಿಂಗ್ ಗೆ ಟೀಂ ಇಂಡಿಯಾ ಬೌಲರ್ ಗಳು ಮಂಕಾಗಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಆಸೀಸ್ 3 ವಿಕೆಟ್ ನಷ್ಟಕ್ಕೆ 327 ರನ್ ಗಳಿಸಿದೆ.

ಆಸೀಸ್ ಪರ ಅಬ್ಬರದ ಬ್ಯಾಟಿಂಗ್ ನಡೆಸಿದ ಟ್ರಾವಿಸ್ ಹೆಡ್ 156 ಎಸೆತಗಳಿಂದ 146 ರನ್ ಗಳಿಸಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅವರಿಗೆ ತಕ್ಕ ಸಾಥ್ ನೀಡುತ್ತಿರುವ ಅನುಭವಿ ಸ್ಟೀವ್ ಸ್ಮಿತ್ 95 ರನ್ ಗಳಿಸಿದ್ದು ಶತಕದ ಹೊಸ್ತಿಲಲ್ಲಿದ್ದಾರೆ.

ಭಾರತ ಈ ಪಂದ್ಯದಲ್ಲಿ ವೇಗಿಗಳನ್ನೇ ನೆಚ್ಚಿಕೊಂಡಿದೆ. ವೇಗಿಗಳ ಪಿಚ್ ಎಂಬ ಕಾರಣಕ್ಕೆ ನಾಲ್ವರು ವೇಗಿಗಳನ್ನು ಕಣಕ್ಕಿಳಿಸಿದೆ. ಆದರೆ ದಕ್ಕಿದ್ದು ಕೇವಲ 3 ವಿಕೆಟ್. ಆಸೀಸ್ ಅಬ್ಬರದ ಬ್ಯಾಟಿಂಗ್ ಮುಂದೆ ಭಾರತದ ಬೌಲರ್ ಗಳು ಪೇಲವವಾಗಿ ಕಂಡರು. ಇಂದೂ ಕೂಡಾ ಆಸೀಸ್ ಬ್ಯಾಟಿಂಗ್ ಗೆ ಕಡಿವಾಣ ಹಾಕಲು ಸಾಧ‍್ಯವಾಗದೇ ಹೋದರೆ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ