ಡಬ್ಲ್ಯುಟಿಸಿ ಫೈನಲ್: ದಾಖಲೆ ಹೊಸ್ತಿಲಲ್ಲಿ ರೋಹಿತ್ ಶರ್ಮಾ

ಬುಧವಾರ, 7 ಜೂನ್ 2023 (08:40 IST)
ದಿ ಓವಲ್: ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಇಂದಿನಿಂದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯವಾಡಲಿದೆ.

ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಹೊಸ ದಾಖಲೆ ಬರೆಯುವ ಅವಕಾಶವಿದೆ. ಇದೇ ಮೊದಲ ಬಾರಿಗೆ ರೋಹಿತ್ ಐಸಿಸಿ ಟೂರ್ನಿಯ ಫೈನಲ್ ನಲ್ಲಿ ಭಾರತವನ್ನು ಮುನ್ನಡೆಸುತ್ತಿದ್ದಾರೆ.

ಈ ಪಂದ್ಯದಲ್ಲಿ ಅವರು 27 ರನ್ ಗಳಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಓಪನರ್ ಆಗಿ 13 ಸಾವಿರ ರನ್ ಪೂರ್ತಿ ಮಾಡಿದ ದಾಖಲೆ ಮಾಡಲಿದ್ದಾರೆ. ಸದ್ಯಕ್ಕೆ 38 ಶತಕಗಳೊಂದಿಗೆ 12973 ರನ್ ಗಳಿಸಿದ್ದಾರೆ. ಈ ಪೈಕಿ ಟೆಸ್ಟ್ ಕ್ರಿಕೆಟ್ ನಲ್ಲಿ ಅವರು 2019 ರಲ್ಲಿ ಪದಾರ್ಪಣೆ ಮಾಡಿ 1794 ರನ್ ಗಳಿಸಿದ್ದಾರೆ. 22 ಟೆಸ್ಟ್ ಪಂದ್ಯವಾಡಿರುವ ಅವರು 6 ಶತಕ ಗಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ