ಡಬ್ಲ್ಯುಟಿಸಿ ಫೈನಲ್: ಮೊದಲ ಸೆಷನ್ ನಲ್ಲಿ ಟೀಂ ಇಂಡಿಯಾಗೆ ಸಿಕ್ಕಿದ್ದು ಎರಡೇ ವಿಕೆಟ್

ಬುಧವಾರ, 7 ಜೂನ್ 2023 (17:08 IST)
Photo Courtesy: Twitter
ದಿ ಓವಲ್: ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಮೊದಲ ದಿನದ ಭೋಜನ ವಿರಾಮದ ವೇಳೆಗೆ ಆಸೀಸ್ ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿದೆ.

ಮೋಡ ಕವಿದ ವಾತಾವರಣದಲ್ಲಿ ವೇಗಿಗಳಿಗೆ ನೆರವಾಗುವ ಪಿಚ್ ನಲ್ಲಿ ಆಸೀಸ್ ಬ್ಯಾಟಿಗರು ಅತ್ಯುತ್ತಮವಾಗಿ ಮೊದಲ ಸೆಷನ್ ಮುಗಿಸಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದ ಉಸ್ಮಾನ್ ಖವಾಜ ಶೂನ್ಯಕ್ಕೆ ನಿರ್ಗಮಿಸಿದರು. ಅವರ ವಿಕೆಟ್ ಮೊಹಮ್ಮದ್ ಶಮಿ ಪಾಲಾಯಿತು.

ಆದರೆ ಬಳಿಕ ಡೇವಿಡ್ ವಾರ್ನರ್-ಲಬುಶೇನ್ ಜೋಡಿ ಉತ್ತಮ ಜೊತೆಯಾಟವಾಡಿದರು. ವಾರ್ನರ್ 43 ರನ್ ಗಳಿಸಿ ಶ್ರಾದ್ಧೂಲ್ ಠಾಕೂರ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಆದರೆ ಲಬುಶೇನ್ 26 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರಿಗೆ 2 ರನ್ ಗಳಿಸಿರುವ ಸ್ಟೀವ್ ಸ್ಮಿತ್ ಸಾಥ್ ನೀಡುತ್ತಿದ್ದಾರೆ. ಉಮೇಶ್ ಯಾದವ್ ಹೊರತಾಗಿ ಉಳಿದರೆಲ್ಲರೂ ಬಿಗುವಿನ ದಾಳಿ ನಡೆಸಿದರು. ಇನ್ನೂ ಭಾರತ ಸ್ಪಿನ್ ದಾಳಿ ಆರಂಭಿಸಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ