ಕೊನೆಗೂ ಕೆಎಲ್ ರಾಹುಲ್ ಗೆ ಡಬ್ಲ್ಯುಟಿಸಿ ಫೈನಲ್ ನಲ್ಲಿ ಸ್ಥಾನ ಫಿಕ್ಸ್ ಮಾಡಿರುವ ಟೀಂ ಇಂಡಿಯಾ!

ಭಾನುವಾರ, 19 ಮಾರ್ಚ್ 2023 (09:20 IST)
ಮುಂಬೈ: ಟೆಸ್ಟ್ ಕ್ರಿಕೆಟ್ ನಲ್ಲಿ ಕಳಪೆ ಫಾರ್ಮ್ ನಿಂದಾಗಿ ಟೀಕೆಗೊಳಗಾಗಿದ್ದರೂ ಕೆಎಲ್ ರಾಹುಲ್ ಮೇಲೆ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ಭಾರೀ ಪ್ರೀತಿಯಿದೆ.

ರಾಹುಲ್ ಇದೀಗ ಏಕದಿನ ಪಂದ್ಯದಲ್ಲಿ ಜವಾಬ್ಧಾರಿಯುತ ಆಟವಾಡಿ ಅರ್ಧಶತಕ ಗಳಿಸಿದ ಬಳಿಕ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಹೇಗಾದರೂ ಸರಿ ಅವರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಕಲ್ಪಿಸಲು ಮುಂದಾಗಿದೆ.

ಹೀಗಾಗಿ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ರಾಹುಲ್ ಗೆ ವಿಕೆಟ್ ಕೀಪರ್ ಆಗಿ ಬಡ್ತಿ ನೀಡಿ ಆಡುವ ಬಳಗಕ್ಕೆ ಸೇರಿಸಲು ಚಿಂತನೆ ನಡೆಸಿದೆಯಂತೆ. ಏಕದಿನ ಪಂದ್ಯಗಳಲ್ಲಿ ವಿಕೆಟ್ ಕೀಪರ್ ಆಗಿ ರಾಹುಲ್ ಕಾರ್ಯ ನಿರ್ವಹಿಸುತ್ತಿದ್ದರು. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭರತ್ ವಿಕೆಟ್ ಕೀಪಿಂಗ್ ಮಾಡಿದ್ದರು. ಆದರೆ ಯುವ ಆಟಗಾರನಿಂದ ಹೇಳಿಕೊಳ್ಳುವ ಪ್ರದರ್ಶನ ಬಂದಿರಲಿಲ್ಲ. ಹೀಗಾಗಿ ರಾಹುಲ್ ಗೆ ಟೆಸ್ಟ್ ಕ್ರಿಕೆಟ್ ನಲ್ಲೂ ಕೀಪರ್ ಪಟ್ಟ ಕಟ್ಟಲು ತಯಾರಿ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ