ಡಬ್ಲ್ಯುಪಿಎಲ್: ಡೆಲ್ಲಿ ಸೋಲಿಸಿ ಎಲಿಮಿನೇಷನ್ ಕುಣಿಕೆಯಿಂದ ಪಾರಾದ ಗುಜರಾತ್

ಶುಕ್ರವಾರ, 17 ಮಾರ್ಚ್ 2023 (08:40 IST)
ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಗೆದ್ದ ಗುಜರಾತ್ ಜೈಂಟ್ಸ್ ಎಲಿಮಿನೇಷನ್ ಅವಮಾನದಿಂದ ತಾತ‍್ಕಾಲಿಕವಾಗಿ ಪಾರಾಗಿದೆ.

ನಿನ್ನೆಯ ಪಂದ್ಯದಲ್ಲಿ ಗುಜರಾತ್ 11 ರನ್ ಗಳ ಜಯ ಗಳಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ಈ ಸುಲಭ ಮೊತ್ತವನ್ನು ಡೆಲ್ಲಿಯ ಡ್ಯಾಶಿಂಗ್ ಓಪನರ್ ಗಳು ಸುಲಭವಾಗಿ ಬೆನ್ನತ್ತಬಹುದು ಎಂಬುದೇ ಎಲ್ಲರ ನಿರೀಕ್ಷೆಯಾಗಿತ್ತು.

ಆದರೆ ಡೆಲ್ಲಿ ಬ್ಯಾಟರ್ ಗಳು 18.4 ಓವರ್ ಗಳಲ್ಲಿ 136 ಕ್ಕೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡರು. ಇದರಿಂದಾಗಿ ಗುಜರಾತ್ 6 ಪಂದ್ಯಗಳಿಂದ 2 ರಲ್ಲಿ ಜಯ ಗಳಿಸಿ ನಿನ್ನೆಯೇ ಕೂಟದಿಂದ ಹೊರನಡೆಯುವ ಅವಮಾನದಿಂದ ಪಾರಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ