ಟೆಸ್ಟ್ ನಲ್ಲಿ ಜೀರೋ ಆಗಿದ್ದ ಕೆಎಲ್ ರಾಹುಲ್ ಮೊದಲ ಏಕದಿನದಲ್ಲಿ ಹೀರೋ
ರವೀಂದ್ರ ಜಡೇಜಾ ಜೊತೆಗೂಡಿದ ಕೆಎಲ್ ರಾಹುಲ್ ರನ್ ಗಳ ಜೊತೆಯಾಟವಾಡಿ ತಂಡಕ್ಕೆ ಗೆಲುವು ಕೊಡಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 35.4 ಓವರ್ ಗಳಲ್ಲಿ 188 ರನ್ ಗಳಿಗೆ ಆಲೌಟ್ ಆಯಿತು. ವೇಗಿಗಳಾದ ಮೊಹಮ್ಮದ್ ಶಮಿ, ಸಿರಾಜ್ ತಲಾ 3, ರವೀಂದ್ರ ಜಡೇಜಾ 2 ಮತ್ತು ಕುಲದೀಪ್ ಯಾದವ್, ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಕಬಳಿಸಿದರು. ಆಸೀಸ್ ಪರ ಮಿಚೆಲ್ ಮಾರ್ಚ್ 81 ರನ್ ಗಳಿಸಿದರು.
ಈ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾಗೆ ಆರಂಭದಲ್ಲೇ ಇಶಾನ್ ಕಿಶನ್ ಕೈಕೊಟ್ಟರು. ಅದಾದ ಬಳಿಕ 5 ವಿಕೆಟ್ ಗಳನ್ನು ಟೀಂ ಇಂಡಿಯಾ ಬಹುಬೇಗನೇ ಕಳೆದುಕೊಂಡಿತ್ತು. ಒಂದು ಹಂತದಲ್ಲಿ 83 ರನ್ ಗಳಿಸಿದ್ದ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.ಈ ಹಂತದಲ್ಲಿ ಜೊತೆಗೂಡಿದ ಕೆಎಲ್ ರಾಹುಲ್-ರವೀಂದ್ರ ಜಡೇಜಾ ಜೋಡಿ ಭಾರತವನ್ನು ಅಪಾಯದಿಂದ ಪಾರು ಮಾಡಿತು. ರಾಹುಲ್ 91 ಎಸೆತಗಳಿಂದ 75 ರನ್ ಗಳಿಸಿದರೆ ಜಡೇಜಾ 69 ಎಸೆತಗಳಿಂದ 45 ರನ್ ಗಳಿಸಿದರು. ಇದರಿಂದಾಗಿ ಭಾರತ 39.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸುವ ಮೂಲಕ ಕೊನೆಗೂ ಗೆಲುವು ಕಂಡಿತು.