ನಾಲ್ಕು ತಿಂಗಳ ಬಳಿಕ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಇಂದು ಆರಂಭ!

ಬುಧವಾರ, 8 ಜುಲೈ 2020 (09:53 IST)
ಲಂಡನ್: ಕೊರೋನಾ, ಲಾಕ್ ಡೌನ್ ಜನರ ಜೀವನವನ್ನೇ ಸಂಪೂರ್ಣವಾಗಿ ಸ್ತಬ್ಧವಾಗಿಸಿತ್ತು. ಇದೀಗ ಮತ್ತೆ ಒಂದೊಂದಾಗಿ ಚಟುವಟಿಕೆಗಳು ಗರಿಗೆದರುತ್ತಿದ್ದು ಇಂದಿನಿಂದ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆರಂಭವಾಗಲಿದೆ.


ಬರೋಬ್ಬರಿ ನಾಲ್ಕು ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದು ನಡೆಯುತ್ತಿದ್ದು, ಅದಕ್ಕೆ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಪಂದ್ಯ ಸಾಕ್ಷಿಯಾಗಲಿದೆ.

ಸೌಥಾಂಪ್ಟನ್ ನಲ್ಲಿ ನಡೆಯಲಿರುವ ಪಂದ್ಯ ಖಾಲಿ ಮೈದಾನದಲ್ಲಿ ನಡೆಯಲಿದೆ. ಆದರೆ ಪ್ರೇಕ್ಷಕರ ಅನುಪಸ್ಥಿತಿ ಆಟಗಾರರ ಉತ್ಸಾಹ ಕುಂದಿಸದಿರಲಿ ಎಂಬ ಕಾರಣಕ್ಕೆ ಕೃತಕವಾಗಿ ಪ್ರೇಕ್ಷಕರ ಚಪ್ಪಾಳೆ, ಸಂಗೀತದ ಮೂಲಕ ರಂಜಿಸಲಾಗುತ್ತಿದೆ. ಕೊರೋನಾ ಕಾರಣದಿಂದ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಂಡು ಕ್ರಿಕೆಟ್ ಪಂದ್ಯ ಸಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ