ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಪ್ರಾಯೋಜಕರಿಗೂ ಗತಿಯಿಲ್ಲ!

ಬುಧವಾರ, 8 ಜುಲೈ 2020 (09:12 IST)
ಇಸ್ಲಾಮಾಬಾದ್: ಕೊರೋನಾದಿಂದಾಗಿ ವಿಶ್ವ ಆರ್ಥಿಕತೆ ಕುಸಿತ ಕಂಡಿದೆ. ಹಲವು ಕಂಪನಿಗಳು ನಷ್ಟದಲ್ಲಿವೆ. ಹೀಗಿರುವಾಗ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಪ್ರಾಯೋಜಕತ್ವ ವಹಿಸಲು ಯಾವುದೇ ಕಂಪನಿಗಳು ಮುಂದೆ ಬರುತ್ತಿಲ್ಲ.


ಪ್ರಸಕ್ತ ಪಾಕಿಸ್ತಾನ ತಂಡಕ್ಕೆ ಪ್ರಾಯೋಜಕತ್ವ ವಹಿಸಿದ್ದ ಕಂಪನಿಯ ಒಪ್ಪಂದ ಕೊನೆಗೊಂಡಿದೆ. ಈ ಹಿನ್ನಲೆಯಲ್ಲಿ ಪಾಕ್ ಮಂಡಳಿ ಪ್ರಾಯೋಜಕರಿಗಾಗಿ ಆಹ್ವಾನ ನೀಡಿದೆ.

ಆದರೆ ಪ್ರಸಕ್ತ ಪ್ರಾಯೋಜಕತ್ವ ವಹಿಸಿದ್ದ ಕಂಪನಿಯೇ ಶೇ. 40 ರಷ್ಟು ಕಡಿಮೆ ಮೊತ್ತಕ್ಕೆ ಪ್ರಾಯೋಜಕತ್ವಕ್ಕೆ ಬಿಡ್ ಸಲ್ಲಿಸಿದೆಯೇ ಹೊರತು ಬೇರೆ ಕಂಪನಿಗಳು ಮುಂದೆ ಬಂದಿಲ್ಲ. ಹೀಗಾಗಿ ಇಂಗ್ಲೆಂಡ್ ಗೆ ಹೊರಟಿರುವ ಪಾಕ್ ತಂಡ ತಲೆಕೆಡಿಸಿಕೊಂಡು ಕೂತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ