ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ಸೌರವ್ ಗಂಗೂಲಿ ಹೆಸರು ಮುಂಚೂಣಿಯಲ್ಲಿ

ಮಂಗಳವಾರ, 7 ಜುಲೈ 2020 (09:17 IST)
ದುಬೈ: ಶಶಾಂಕ್ ಮನೋಹರ್ ಅವರಿಂದ ತೆರವಾದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಈಗ ಹಲವು ಹೆಸರುಗಳು ಕೇಳಿಬರುತ್ತಿದ್ದು, ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಹೆಸರು ಮುಂಚೂಣಿಯಲ್ಲಿದೆ.


ಗಂಗೂಲಿಗೆ ಬಿಸಿಸಿಐಯಲ್ಲಿ ಇನ್ನು 9 ತಿಂಗಳು ಅಧಿಕಾರಾವಧಿಯಿದೆ. ಲೋಧಾ ಸಮಿತಿ ಶಿಫಾರಸ್ಸಿನ ಅನ್ವಯ ಗಂಗೂಲಿ ಮತ್ತೆಯೂ ಬಿಸಿಸಿಐ ಅಧ‍್ಯಕ್ಷರಾಗಿ ಮುಂದುವರಿಯಬೇಕಾದರೆ ನಿಯಮಗಳಲ್ಲಿ ಬದಲಾವಣೆ ಮಾಡಬೇಕಿದೆ. ಇದರ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಲಾಗಿದೆ.

ಆದರೆ ಕೋರ್ಟ್ ಬದಲಾವಣೆ ಮಾಡಲು ಒಪ್ಪದೇ ಹೋದರೆ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಮುಂದುವರಿಯಲು ಸಾಧ‍್ಯವಿಲ್ಲ. ಹೀಗಾಗಿ ಗಂಗೂಲಿ ಈಗಲೇ ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ಗಂಗೂಲಿ ಸ್ಪರ್ಧಿಸಬಹುದಾಗಿದೆ. ಗಂಗೂಲಿಗೆ ದ.ಆಫ್ರಿಕಾ, ಶ್ರೀಲಂಕಾ ಕ್ರಿಕೆಟ್ ಮಂಡಳಿಗಳು ಬೆಂಬಲ ಸೂಚಿಸಿವೆ. ಗಂಗೂಲಿ ಅಲ್ಲದೆ ಇಂಗ್ಲೆಂಡ್ ನ ಕಾಲಿನ್ ಗ್ರೇಮ್ಸ್, ವಿಂಡೀಸ್ ನ ಡೇವ್ ಕ್ಯಾಮರೂನ್,  ಹಂಗಾಮಿ ಮುಖ್ಯಸ್ಥ ಇಮ್ರಾನ್ ಖವಾಜ ಮುಂತಾದವರೂ ಪೈಪೋಟಿಯಲ್ಲಿದ್ದಾರೆ. ಹೀಗಾಗಿ ಗಂಗೂಲಿ ಸ್ಪರ್ಧಿಸಿದರೂ ಅವರಿಗೆ ಪ್ರಬಲ ಪೈಪೋಟಿಗಳಿದ್ದೇ ಇರುತ್ತವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ