ರಾಷ್ಟ್ರೀಯ ತಂಡವನ್ನು ಬಾಧಿಸುತ್ತಿರುವ ಕಳಪೆ ಬ್ಯಾಟಿಂಗ್ ಸಮಸ್ಯೆಗಳಿಗೆ ಕ್ರಿಕೆಟ್ ಆಡಳಿತ ಮಂಡಳಿ ಮಾಜಿ ಬ್ಯಾಟಿಂಗ್ ದಿಗ್ಗಜರ ನೆರವನ್ನು ಪಡೆಯಬೇಕೆಂದು ಮಾಜಿ ಸ್ಪಿನ್ನರ್ ಸಕ್ಲೇನ್ ಮುಸ್ತಾಕ್ ಸಲಹೆ ಮಾಡಿದ್ದಾರೆ. ಜಾವೇದ್ ಮಿಯಂದಾದ್, ಇನ್ಜಮುಮ್ ಉಲ್ ಹಕ್ ಮತ್ತು ಮಹಮ್ಮದ್ ಯುಸುಫ್ ಮುಂತಾದ ದಿಗ್ಗಜರ ಸೇವೆ ಬಳಸಿಕೊಂಡು ಬ್ಯಾಟಿಂಗ್ ವಿಭಾಗದಲ್ಲಿ ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ಮಾಡುವುದಾಗಿ ತಿಳಿಸಿದರು.