ಮೊದಲ ಪರೀಕ್ಷೆಯಲ್ಲೇ ಪಾಸಾದ ಗಂಭೀರ್, ಸೂರ್ಯ ಕುಮಾರ್

Sampriya

ಬುಧವಾರ, 31 ಜುಲೈ 2024 (10:16 IST)
Photo Courtesy X
ಪಲೆಕೆಲೆ: ಭಾರತ ಕ್ರಿಕೆಟ್ ತಂಡ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಮತ್ತು ಪೂರ್ಣಾವಧಿ ನಾಯಕ ರಾಗಿ ಸೂರ್ಯಕುಮಾರ್ ಯಾದವ್ ಅವರು ಆಡಿದ ಮೊದಲ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ಚೊಚ್ಚಲ ಸವಾಲನ್ನು ಗೆದ್ದಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ  ಫೀಲ್ಡಿಂಗ್ ಆಯ್ಕೆ ಮಾಡಿ, ಭಾರತ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಭಾರತ ತಂಡವು ಶ್ರೀಲಂಕಾ ಎದುರಿನ ಸರಣಿಯ ಕೊನೆಯ ಟಿ20 ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ಜಯ ಸಾಧಿಸಿತು. ಇದರೊಂದಿಗೆ ಸರಣಿಯನ್ನು 3-0ಯಿಂದ ಕೈವಶ ಮಾಡಿಕೊಂಡಿತು.


ಭಾರತ ತಂಡವನ್ನು  20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 137 ರನ್‌ಗಳ ಸಾಧಾರಣ ಮೊತ್ತಕ್ಕೆ ಲಂಕಾ ಬೌಲರ್‌ಗಳು ಕಟ್ಟಿಹಾಕಿದರು. ಗುರಿ ಬೆನ್ನಟ್ಟಿದ ಲಂಕಾ ತಂಡವು ಉತ್ತಮ ಆರಂಭ ಪಡೆದಿತ್ತು. ಆದರೆ ಕೊನೆಯ ಹಂತದಲ್ಲಿ ನಾಟಕೀಯ ಕುಸಿತ ಕಂಡಿತು. ಹೀಗಾಗಿ 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 137ರನ್ ಗಳಿಸಿ ಪಂದ್ಯ ಸಮಬಲ ಗೊಂಡಿತು.

ನಂತರ  ನಡೆದ ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡವು ಒಂದು ಓವರ್‌ನಲ್ಲಿ 2 ರನ್ ಗಳಿಸಿತು. ಇದಕ್ಕುತ್ತರವಾಗಿ ಸೂರ್ಯಕುಮಾರ್ ಯಾದವ್ ಒಂದು ಬೌಂಡರಿ ಹೊಡೆದು ಜಯಭೇರಿ ಬಾರಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ