ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಯಾರೆಂದು ಖಚಿತಪಡಿಸಿದ ಗೌತಮ್ ಗಂಭೀರ್

Krishnaveni K

ಸೋಮವಾರ, 11 ನವೆಂಬರ್ 2024 (11:43 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಖಾಯಂ ನಾಯಕ ರೋಹಿತ್ ಶರ್ಮಾ ಗೈರಾದರೆ ಅವರ ಅನುಪಸ್ಥಿತಿಯಲ್ಲಿ ತಂಡದ ನಾಯಕ ಯಾರಾಗಲಿದ್ದಾರೆ ಎಂಬುದನ್ನು ಕೋಚ್ ಗೌತಮ್ ಗಂಭೀರ್ ಖಚಿತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆಸ್ಟ್ರೇಲಿಯಾ ಸರಣಿ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಂಬರುವ ಸರಣಿಯ ಮೊದಲ ಪಂದ್ಯಕ್ಕೆ ರೋಹಿತ್ ಕೌಟುಂಬಿಕ ಕಾರಣಕ್ಕೆ ಲಭ್ಯರಾಗುವುದು ಅನುಮಾನವಾಗಿದೆ. ಅವರ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ಅವರೇ ತಂಡದ ನಾಯಕರಾಗಲಿದ್ದಾರೆ ಎಂದಿದ್ದಾರೆ.

‘ಬುಮ್ರಾ ತಂಡದ ಉಪನಾಯಕ. ಒಂದು  ವೇಳೆ ರೋಹಿತ್ ಗೈರಾದರೆ ಸಹಜವಾಗಿಯೇ ಬುಮ್ರಾ ಅವರೇ ತಂಡದ ನಾಯಕರು. ಪರ್ತ್ ನಲ್ಲಿ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ.ಆದರೆ ರೋಹಿತ್ ಇನ್ನೂ ಅಲಭ್ಯತೆ ಬಗ್ಗೆ ಖಚಿತಪಡಿಸಿಲ್ಲ. ಅವರು ಆಡಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. ಪಂದ್ಯಕ್ಕೆ ಮೊದಲು ಖಚಿತಪಡಿಸಲಿದ್ದೇವೆ’ ಎಂದು ಗಂಭೀರ್ ಹೇಳಿದ್ದಾರೆ.

ಈಗಾಗಲೇ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಹೀನಾಯವಾಗಿ ಸೋತಿರುವುದರಿಂದ ಗಂಭೀರ್ ಮತ್ತು ತಂಡದ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕಾದ ಒತ್ತಡದಲ್ಲಿದೆ. ನಾಯಕ ರೋಹಿತ್, ಕೋಚ್ ಗಂಭೀರ್ ಸೇರಿದಂತೆ ಹಿರಿಯ ಆಟಗಾರರಿಗೆ ಇದು ನಿರ್ಣಾಯಕ ಸರಣಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ