ರೋಹಿತ್ ಶರ್ಮಾ ಇಷ್ಟ ಬಂದಾಗ ತಂಡಕ್ಕೆ ಬರಲಿ, ಆಸ್ಟ್ರೇಲಿಯಾ ಸರಣಿಗೆ ಹೊಸ ಕ್ಯಾಪ್ಟನ್

Krishnaveni K

ಬುಧವಾರ, 6 ನವೆಂಬರ್ 2024 (09:18 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಖಾಯಂ ನಾಯಕ ರೋಹಿತ್ ಶರ್ಮಾ ಅಲಭ್ಯರಾಗಲಿದ್ದಾರೆ. ಈ ಬಗ್ಗೆ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ.

ವೈಯಕ್ತಿಕ ಕಾರಣಗಳಿಂದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಲು ಸಾಧ್ಯವಾಗುತ್ತಿಲ್ಲ ಎಂದು ರೋಹಿತ್ ಶರ್ಮಾ ಈಗಾಗಲೇ ಹೇಳಿದ್ದಾರೆ. ಹೀಗಾಗಿ ಮೊದಲ ಟೆಸ್ಟ್ ಪಂದ್ಯಕ್ಕೆ ಹೊಸ ನಾಯಕನ ಆಯ್ಕೆ ನಡೆಯಬೇಕಿದೆ. ಜಸ್ಪ್ತೀತ್ ಬುಮ್ರಾ ಹೆಸರು ಈಗಾಗಲೇ ಬಲವಾಗಿ ಕೇಳಿಬರುತ್ತಿದೆ.

ಇದರ ನಡುವೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ವಿಶಿಷ್ಟ ಸಲಹೆ ಕೊಟ್ಟಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ರೋಹಿತ್ ಶರ್ಮಾ ಹೇಗಿದ್ದರೂ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯ ಎಂದಿದ್ದಾರೆ. ಹೀಗಾಗಿ ಆಯ್ಕೆಗಾರರು ಕೇವಲ ಮೊದಲ ಟೆಸ್ಟ್ ಪಂದ್ಯಕ್ಕೆ ಹೊಸ ನಾಯಕನ ಆಯ್ಕೆ ಮಾಉವ ಬದಲು ಇಡೀ ಸರಣಿಗೇ ಹೊಸ ನಾಯಕನ ಆಯ್ಕೆ ಮಾಡಲಿ. ರೋಹಿತ್ ಶರ್ಮಾ ತಮಗೆ ಇಷ್ಟ ಬಂದಾಗ ತಂಡ ಸೇರಿಕೊಳ್ಳಲಿ ಎಂದಿದ್ದಾರೆ.

ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸೋಲು ಅನುಭವಿಸಿದ ಬಳಿಕ ರೋಹಿತ್ ನಾಯಕತ್ವದ ಬಗ್ಗೆ ಸಾಕಷ್ಟು ಟೀಕೆ ಕೇಳಿಬಂದಿತ್ತು. ವಿಶೇಷವಾಗಿ ಅವರ ಕಳಪೆ ಫಾರ್ಮ್ ಪ್ರಶ್ನಾರ್ಹವಾಗಿದೆ. ಹೀಗಾಗಿ ಅಭಿಮಾನಿಗಳೂ ರೋಹಿತ್ ನಿವೃತ್ತಿಯಾಗಲಿ ಎಂದು ಆಗ್ರಹಿಸಿದ್ದರು. ಇದರ ನಡುವೆ ಸುನಿಲ್ ಗವಾಸ್ಕರ್ ಇಂತಹದ್ದೊಂದು ಸಲಹೆ ಕೊಟ್ಟಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ