ಧೋನಿ ನನ್ನ ನೆಚ್ಚಿನ ಸಹ ಬ್ಯಾಟಿಗ: ದಿಡೀರ್ ಧೋನಿ ಹೊಗಳಿದ ಗಂಭೀರ್

ಬುಧವಾರ, 22 ನವೆಂಬರ್ 2023 (10:52 IST)
Photo Courtesy: Twitter
ನವದೆಹಲಿ: 2011 ರ ವಿಶ್ವಕಪ್ ಫೈನಲ್ ಹೀರೋಗಳಲ್ಲಿ ಒಬ್ಬರಾಗಿರುವ ಗೌತಮ್ ಗಂಭೀರ್ ಪದೇ ಪದೇ ಧೋನಿ, ಕೊಹ್ಲಿ ವಿರುದ್ಧ ಕಿಡಿ ಕಾರುತ್ತಲೇ ಸುದ್ದಿಯಾಗುತ್ತಾರೆ.

ಆದರೆ ಈ ಬಾರಿ ಗೌತಮ್ ಅಚ್ಚರಿಯೆಂಬಂತೆ ಧೋನಿ ಬಗ್ಗೆ ಹೊಗಳಿ ಸುದ್ದಿಯಾಗಿದ್ದಾರೆ. ವೈಟ್ ಬಾಲ್ ಕ್ರಿಕೆಟ್ ನಲ್ಲಿ ನನ್ನ ಮೆಚ್ಚಿನ ಸಹ ಬ್ಯಾಟರ್ ಸೆಹ್ವಾಗ್ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ನನ್ನ ಮೆಚ್ಚಿನ ಪಾರ್ಟನರ್ ಧೋನಿ ಎಂದು ಹೇಳುವ ಮೂಲಕ ಅಭಿಮಾನಿಗಳ ಹುಬ್ಬೇರುವಂತೆ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಗಂಭೀರ್ ನನ್ನ ನೆಚ್ಚಿನ ಸಹ ಬ್ಯಾಟರ್ ಧೋನಿ. ಜನರು ನನ್ನ ನೆಚ್ಚಿನ ಸಹ ಆಟಗಾರ ಸೆಹ್ವಾಗ್ ಎಂದು ಭಾವಿಸುತ್ತಾರೆ. ಆದರೆ ವಾಸ್ತವವಾಗಿ ನಾನು ಧೋನಿಯೊಂದಿಗೆ ಆಡಲು ಹೆಚ್ಚು ಇಷ್ಟಪಡುತ್ತೇನೆ. ಅದರಲ್ಲೂ ವಿಶೇಷವಾಗಿ ವೈಟ್ ಬಾಲ್ ಕ್ರಿಕೆಟ್ ನಲ್ಲಿ ನಾವು ಅನೇಕ ದೊಡ್ಡ ಜೊತೆಯಾಟವನ್ನು ಹಂಚಿಕೊಂಡಿದ್ದೇವೆ’ ಎಂದು ಎಲ್ಲರನ್ನೂ ಅಚ್ಚರಿಗೊಳಪಡಿಸಿದ್ದಾರೆ.

ಗೌತಮ್ ಗಂಭೀರ್ ಮತ್ತು ಧೋನಿ 2011 ರ ವಿಶ್ವಕಪ್ ಫೈನಲ್ ಹೀರೋಗಳು. ಆದರೆ ಫೈನಲ್ ಪಂದ್ಯ ಗೆಲ್ಲಿಸಿದ್ದು ಧೋನಿ ಸಿಕ್ಸರ್ ಮಾತ್ರವಲ್ಲ ಎಂದು ಆಗಾಗ ಗಂಭೀರ್ ಟಾಂಗ್ ಕೊಡುತ್ತಲೇ ಇರುತ್ತಾರೆ. ಅವಕಾಶ ಸಿಕ್ಕಾಗಲೆಲ್ಲಾ ಧೋನಿ ವಿರುದ್ಧ ಕಿಡಿ ಕಾರುವ ಗಂಭೀರ್ ಈ ಬಾರಿ ಹೊಗಳಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ