ಕುಲದೀಪ್ ಯಾದವ್ ಪಾಲಿಗೆ ‘ಧೋನಿ’ಯಾದ ಕೆಎಲ್ ರಾಹುಲ್

ಬುಧವಾರ, 13 ಸೆಪ್ಟಂಬರ್ 2023 (08:20 IST)
Photo Courtesy: Twitter
ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಸ್ಪಿನ್ನರ್ ಕುಲದೀಪ್ ಯಾದವ್ ಪಾಲಿಗೆ ಕೆಎಲ್ ರಾಹುಲ್ ‘ಧೋನಿ’ಯಾಗಿದ್ದಾರೆ!

ಕುಲದೀಪ್ ಯಾದವ್ ವೃತ್ತಿ ಜೀವನದ ಆರಂಭದಲ್ಲಿ ಧೋನಿ ನಾಯಕತ್ವದಲ್ಲಿ ಆಡಿದ್ದರು. ಆಗೆಲ್ಲಾ ವಿಕೆಟ್ ಕೀಪರ್ ಆಗಿದ್ದ ಧೋನಿ ಸಲಹೆ ಪಡೆದು ಕುಲದೀಪ್ ಸಾಕಷ್ಟು ಯಶಸ್ಸು ಪಡೆಯುತ್ತಿದ್ದರು. ಇದೀಗ ಏಷ್ಯಾ ಕಪ್ ಟೂರ್ನಿಯಲ್ಲಿ ಅಂದು ಧೋನಿ ಸಲಹೆ ನೀಡುತ್ತಿದ್ದಂತೇ ಕುಲದೀಪ್ ಗೆ ವಿಕೆಟ್ ಕೀಪರ್ ಕೆಎಲ್ ರಾಹುಲ್ ನೀಡುತ್ತಿದ್ದಾರೆ.

ಕಳೆದ ಎರಡೂ ಪಂದ್ಯಗಳಲ್ಲಿ ಬ್ಯಾಟಿಗನ ಚಲವಲನ ಗಮನಿಸಿ ಯಾವ ರೀತಿ ಬೌಲಿಂಗ್ ಮಾಡಿದರೆ ಸೂಕ್ತ ಎಂದು ಕೆಎಲ್ ರಾಹುಲ್ ಸಲಹೆ ನೀಡುತ್ತಿದ್ದಾರೆ. ರಾಹುಲ್ ಸಲಹೆ ಪಾಲಿಸಿದ ಕುಲದೀಪ್ ವಿಕೆಟ್ ಕೀಳುವಲ್ಲೂ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಕೆಎಲ್ ರಾಹುಲ್ ರನ್ನು ಸಂದರ್ಶಕರು ಪ್ರಶ್ನಿಸಿದಾಗ ‘ವಿಕೆಟ್ ಹಿಂದುಗಡೆ ನಿಂತು ನನಗೆ ತಿಳಿಯುವ ಕೆಲವು ಸಲಹೆಗಳನ್ನು ನೀಡುತ್ತೇನೆ. ಆದರೆ ಕುಲದೀಪ್ ಯಶಸ್ಸಿನ ಕ್ರೆಡಿಟ್ ನಾನು ತೆಗೆದುಕೊಳ್ಳಲು ಇಷ್ಟಪಡಲ್ಲ. ನಾನು ಏನೇ ಹೇಳಿದರೂ ಅಂತಿಮವಾಗಿ ಅದನ್ನು ಕಾರ್ಯರೂಪಕ್ಕೆ ತರುವವರು ಅವರು. ಹೀಗಾಗಿ ಇದರ ಯಶಸ್ಸು ಅವರಿಗೇ ಸಲ್ಲಬೇಕು’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ