ಕೊಹ್ಲಿ ಅಂದ್ರೆ, ಗುರ್ ಅಂತಿದ್ದ ಗೌತಮ್ ಗಂಭೀರ್..!

ಮಂಗಳವಾರ, 24 ಅಕ್ಟೋಬರ್ 2023 (11:42 IST)
ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದ ಆಧಾರ ಸ್ತಂಭ. ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಮಿಂಚಿ, ತಾವೊಬ್ಬ ಸಮರ್ಥ ಕ್ರಿಕೆಟಿಗ ಅನ್ನೋದನ್ನು ಸಾಬೀತುಪಡಸುತ್ತಿದ್ದಾರೆ. ಹಾಗೇ ನೋಡಿದರೆ ಸದ್ಯ ಭಾರತದ ಆತಿಥ್ಯದಲ್ಲೆ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಭರ್ಜರಿ ಫಾರ್ಮ್ನಲ್ಲಿದ್ದಾರೆ.
 
ಆದರೆ ಕಿಂಗ್ ಕೊಹ್ಲಿಯ ಈ ಅದ್ಭುತ ಪ್ರದರ್ಶನವೇ ಈಗ ಅವರ ಬಗ್ಗೆ ಕ್ರಿಕೆಟ್ ವಲಯದಲ್ಲಿ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ. ಅದರಲ್ಲೂ ಅವರ ಮೇಲೆ ಪದೇ ಪದೇ ಕಿಡಿಕಾರುತ್ತಾ, ವೈಯಕ್ತಿಕವಾಗಿ ಮಾತಿನ ಮೂಲಕ ಟಾಂಗ್ ಕೊಡುತ್ತಿದ್ದ ಮಾಜಿ ಕ್ರಿಕೆಟಿಗ ಗೌತಮ್ ಗಂಭಿರ್, ಇದೀಗ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಸಾಮರ್ಥ್ಯವನ್ನು ಕಂಡು, ಹಾಡಿ ಹೊಗಳಿದ್ದಾರೆ.
 
ಹಾಗಾದ್ರೆ ಗೌತಮ್ ಗಂಭೀರ್ ಏನಂದ್ರು, ಯಾಕೆ ಇದ್ದಕಿದ್ದ ಹಾಗೇ ಈ ಪಾಟಿ ಹೊಗಳಿಗೆ ಬಂತು, ಅಂತ ನೋಡಿದ್ರೆ, ಅದಕ್ಕೆ ಕಾರಣ ಸದ್ಯ ವಿಶ್ವಕಪ್‌ನ ಪ್ರತಿ ಪಂದ್ಯದಲ್ಲೂ ವಿರಾಟ್ ತಮ್ಮ ಬ್ಯಾಟಿಂಗ್ ಮೂಲಕ ದೂಳೆಬ್ಬಿಸುತ್ತಿರುವ ಆ ಪರಿ. ಬಹುಶಃ ಗಂಭಿರ್‌ಗೇ ಈಗ ಕೊಹ್ಲಿಯ ಬ್ಯಾಟಿಂಗ್ ಪ್ರದರ್ಶನ ವೈಯಕ್ತಿಕವಾಗಿ ಇಷ್ಟವಾಗಿರಬೇಕು ಅದಕ್ಕೆ ಈ ಮಾತು, ಅಭಿಮಾನ ಉಕ್ಕಿ ಹರಿದಿರಬಹುದು..?
 
ವಿರಾಟ್ ಆಧುನಿಕ ಕ್ರಿಕೆಟ್‌ನ ಶ್ರೇಷ್ಟ ಆಟಗಾರ, ಹಾಗೇ ಹೀಗೆ ಅಂತ ಗೌತಮ್‌ಗಂಭಿರ್ ಗುಣಗಾನ ಮಾಡಿದ್ದಾರೆ. ಹೌದು ಗಂಭಿರ್ ಹೀಗೆ ಹೇಳಿದ್ದೆ, ಕೊಹ್ಲಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಅಬ್ಬಾ ಇದೆಂಥಾ ಮಾತು ಅಂತ ಬಾಯಿ ಮೇಲೆ ಬೆರಳು ಇಟ್ಟು ಒಂದು ಕ್ಷಣ ಹಾಗೇ ಯೋಚಿಸುತ್ತಿದ್ದಾರೆ..? ಬಹುಶಃ ಅಭಿಮಾನಿಗಳಿಗೂ ಇದು ಕನಸ್ಸಾ ಇಲ್ಲ ನನಸ್ಸಾ ಅಂತ ಅನ್ನಿಸಿರಬಹುದು…?

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ