ಟೀಂ ಇಂಡಿಯಾ ಕೋಚ್ ಆಗಿ ಗಂಭೀರ್ ಡ್ಯೂಟಿ ಶುರು: ರಾಹುಲ್ ದ್ರಾವಿಡ್ ನೆನೆಸಿಕೊಂಡ ನೆಟ್ಟಿಗರು

Krishnaveni K

ಬುಧವಾರ, 24 ಜುಲೈ 2024 (11:22 IST)
ದಂಬುಲಾ: ಟೀಂ ಇಂಡಿಯಾ ನೂತನ ಕೋಚ್ ಆಗಿ ನೇಮಕವಾಗಿರುವ ಗೌತಮ್ ಗಂಭೀರ್ ನಿನ್ನೆಯಿಂದ ಡ್ಯೂಟಿ ಶುರು ಮಾಡಿದ್ದಾರೆ. ಮೊದಲ ದಿನವೇ ಗಂಭೀರ್ ಕಾರ್ಯವೈಖರಿ ಬಗ್ಗೆ ಬಿಸಿಸಿಐ ವಿಡಿಯೋವೊಂದನ್ನು ಹಂಚಿಕೊಂಡಿದೆ.

ಭಾರತದ ನೆಟ್ ಪ್ರಾಕ್ಟೀಸ್ ವೇಳೆ ಗಂಭೀರ್ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಸಂಜು ಸ್ಯಾಮ್ಸನ್ ಸೇರಿದಂತೆ ತಂಡದ ಆಟಗಾರರಿಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಇದಾದ ಬಳಿಕ ಎಲ್ಲಾ ಆಟಗಾರರನ್ನು ಸರ್ಕಲ್ ಮಾಡಿಕೊಂಡು ಕಿರು ಮಾತುಕತೆ ನಡೆಸಿದ್ದಾರೆ. ಈ ವಿಡಿಯೋಗಳನ್ನು ವೀಕ್ಷಿಸಿದ ನೆಟ್ಟಿಗರು ಏನೇ ಆದರೂ ನಾವು ರಾಹುಲ್ ದ್ರಾವಿಡ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.
  
ಗೌತಮ್ ಗಂಭೀರ್ ಮೊದಲ ದಿನ ಆಟಗಾರರ ಜೊತೆ ಬಿಂದಾಸ್ ಆಗಿ ಕಾಲ ಕಳೆದಿದ್ದಾರೆ. ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲೇ ಗಂಭೀರ್ ತಾನು ಯಶಸ್ವೀ ತಂಡದ ಕೋಚ್ ಆಗುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದರು. ಅಲ್ಲದೆ, ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೂ ಬೆಂಬಲ ವ್ಯಕ್ತಪಡಿಸಿದ್ದರು.

ಇದೀಗ ಟಿ20 ಸರಣಿಯಲ್ಲಿ ಗಂಭೀರ್ ಯುವ ತಂಡಕ್ಕೆ ಕೋಚ್ ಆಗಿದ್ದಾರೆ. ಸೂರ್ಯಕುಮಾರ್ ಯಾದವ್ ಟಿ20 ತಂಡದ ನಾಯಕರಾಗಿದ್ದಾರೆ. ತಮ್ಮ ಮೊದಲ ಸರಣಿಯಲ್ಲೇ ಗಂಭೀರ್ ಇಂಪ್ರೆಸ್ ಮಾಡುತ್ತಾರಾ ಎಂದು ಕಾದುನೋಡಬೇಕಿದೆ. ಜುಲೈ 27 ರಿಂದ ಟಿ20 ಸರಣಿ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ