ಕೋಚ್ ಆಗಿ ಇದು ಗಂಭೀರ್ ಗೆ ಮೊದಲ ಸರಣಿಯಾಗಿರುವುದರಿಂದ ತಮ್ಮ ಯೋಜನೆಗಳ ಬಗ್ಗೆ, ತಂಡದ ಬಗ್ಗೆ ಇಂದು ಮಾಧ್ಯಮಗಳ ಮುಂದೆ ಮನಬಿಚ್ಚಿ ಮಾತನಾಡಲಿದ್ದಾರೆ. ಇದಕ್ಕೆ ಮೊದಲು ದ್ರಾವಿಡ್ ಕೂಡಾ ಕೋಚ್ ಆದ ಬಳಿಕ ತಮ್ಮ ಮೊದಲ ಸರಣಿಗೆ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದರು.
ಇಂದು ಟಿ20 ಸರಣಿಗಾಗಿ ಸೂರ್ಯಕುಮಾರ್ ಯಾದವ್ ನೇತೃತ್ವದ ಮೊದಲ ತಂಡ ಲಂಕಾಗೆ ಪ್ರಯಾಣ ಬೆಳೆಸಲಿದೆ. ಜುಲೈ 27 ರಂದು ಮೊದಲ ಟಿ20 ಪಂದ್ಯ ನಡೆಯಲಿದೆ. ಅದಾದ ಬಳಿಕ ಏಕದಿನ ಸರಣಿ ಆಡಲಿರುವ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಮತ್ತೊಂದು ಬಳಗ ಲಂಕಾಗೆ ಪ್ರಯಾಣ ಬೆಳೆಸಲಿದೆ.