ಡೆಲ್ಲಿ ಐಪಿಎಲ್ ತಂಡವನ್ನು ಖರೀದಸಲಿರುವ ಗೌತಮ್ ಗಂಭೀರ್?!

ಶುಕ್ರವಾರ, 6 ಡಿಸೆಂಬರ್ 2019 (10:54 IST)
ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ದೆಹಲಿ ಸಂಸದ ಗೌತಮ್ ಗಂಭೀರ್ ಐಪಿಎಲ್ ನಲ್ಲಿ ಒಂದು ಕಾಲದಲ್ಲಿ ತಾವು ಪ್ರತಿನಿಧಿಸಿದ್ದ ಡೆಲ್ಲಿ ತಂಡದ ಸಹಮಾಲಿಕರಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.


ಐಪಿಎಲ್ ನಲ್ಲಿ ಗಂಭೀರ್ ಆಡಿರುವುದು ಕೋಲ್ಕೊತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಪರ. ಇದೀಗ ಡೆಲ್ಲಿ ತಂಡ ಶೇ.10 ರಷ್ಟು ಶೇರು 100 ಕೋಟಿಗೆ ಖರೀದಿಸಲು ಗಂಭೀರ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಮೂಲಕ ಒಂದು ಕಾಲದಲ್ಲಿ ತಾವು ಪ್ರತಿನಿಧಿಸಿದ್ದ ತಂಡಕ್ಕೆ ಗಂಭೀರ್ ಸಹಮಾಲಿಕರಾಗಲಿದ್ದಾರೆ. ಇದೀಗ ಡೆಲ್ಲಿ ತಂಡದ ಪ್ರಮುಖ ಮಾಲಿಕರಾಗಿರುವ ಜಿಎಂಆರ್ ಸಂಸ್ಥೆಯ ಜತೆಗೆ ಗಂಭೀರ್ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ