ಭಾರತ-ವೆಸ್ಟ್ ಇಂಡೀಸ್ ಟೆಸ್ಟ್: ಇಂದು ಕೊನೆಯ ದಿನದ ಕೌತುಕ
ದ್ವಿತೀಯ ಇನಿಂಗ್ಸ್ ನಲ್ಲಿ ವೇಗವಾಗಿ ರನ್ ಗಳಿಸಿದ ಭಾರತ 2 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನಿಂಗ್ಸ್ ನಲ್ಲಿ 183 ರನ್ ಗಳ ಮುನ್ನಡೆ ಸೇರಿದಂತೆ ಭಾರತಕ್ಕೆ ಒಟ್ಟು 364 ರನ್ ಗಳ ಮುನ್ನಡೆ ಸಿಕ್ಕಿತು. ದ್ವಿತೀಯ ಇನಿಂಗ್ಸ್ ನಲ್ಲಿ ಟಿ20 ಶೈಲಿಯಲ್ಲಿ ಬ್ಯಾಟ್ ಬೀಸಿದ ನಾಯಕ ರೋಹಿತ್ ಶರ್ಮಾ 44 ಎಸೆತಗಳಿಂದ 57 ರನ್ ಗಳಿಸಿ ಔಟಾದರೆ ಯಶಸ್ವಿ ಜೈಸ್ವಾಲ್ 38 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮುರಿಯದ ಮೂರನೇ ವಿಕೆಟ್ ಗೆ ಶುಬ್ಮನ್ ಗಿಲ್ 29, ಇಶಾನ್ ಕಿಶನ್ 34 ಎಸೆತಗಳಿಂದ 52 ರನ್ ಸಿಡಿಸಿ ಟೀಂ ಇಂಡಿಯಾ ಬೃಹತ್ ಗುರಿ ನೀಡಲು ಸಹಾಯ ಮಾಡಿದರು.
ಈ ಮೊತ್ತ ಬೆನ್ನತ್ತಿರುವ ವಿಂಡೀಸ್ ನಿನ್ನೆಯ ದಿನದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 76 ರನ್ ಗಳಿಸಿದೆ. ನಾಯಕ ಬ್ರಾತ್ ವೈಟ್ 28 ರನ್, ಮೆಕೆಂಝಿ ಶೂನ್ಯಕ್ಕೆ ನಿರ್ಗಮಿಸಿದರು. ಈ ಎರಡೂ ವಿಕೆಟ್ ರವಿಚಂದ್ರನ್ ಅಶ್ವಿನ್ ಪಾಲಾಯಿತು. ಇದೀಗ ವಿಂಡೀಸ್ ಕೊನೆಯ ದಿನವಾದ ಇಂದು 289 ರನ್ ಗಳಿಸಬೇಕಿದೆ.