ಹನುಮ ವಿಹಾರಿ ಔಟ್ ತೀರ್ಪಿನ ಸುತ್ತ ಸುತ್ತಿಕೊಂಡ ವಿವಾದ

ಶುಕ್ರವಾರ, 4 ಜನವರಿ 2019 (15:43 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಹನುಮ ವಿಹಾರಿಗೆ ನೀಡಿದ ಔಟ್ ತೀರ್ಪು ಈಗ ವಿವಾದಕ್ಕೀಡಾಗಿದೆ.


ಕೆಳ ಕ್ರಮಾಂಕದಲ್ಲಿ ಆಡಲಿಳಿದ ವಿಹಾರಿ 42 ರನ್ ಗಳಿಸಿದಾಗ ನಥನ್ ಲಿಯನ್ ಬೌಲಿಂಗ್ ನಲ್ಲಿ ಕ್ಯಾಚ್ ಔಟ್ ಆದರು. ಆದರೆ ಈ ತೀರ್ಪು ಈಗ ವಿವಾದಕ್ಕೀಡಾಗಿದೆ.

ಆದರೆ ಅಂಪಾಯರ್ ಕೂಡಲೇ ಔಟ್ ನೀಡಿದಾಗ ಅನುಮಾನಗೊಂಡ ಹನುಮ ವಿಹಾರಿ ರಿವ್ಯೂಗೆ ಮನವಿ ಮಾಡಿದರು. ಆದರೆ ರಿವ್ಯೂನಲ್ಲೂ ಬಾಲ್ ಬ್ಯಾಟಿಗ್ ತಾಗಿದೆಯೇ ಎಂಬುದು ಸರಿಯಾಗಿ ಸ್ಪಷ್ಟವಾಗಲಿಲ್ಲ. ಆದರೆ ಔಟ್ ತೀರ್ಪು ನೀಡಲಾಯಿತು. ಈಗ ಆ ತೀರ್ಪಿನ ಬಗ್ಗೆ ಚರ್ಚೆ ಆರಂಭವಾಗಿದ್ದು, ಆಸೀಸ್ ನ ಮಾಜಿ ಕ್ರಿಕೆಟಿಗರಾದ ಮೈಕಲ್ ಕ್ಲಾರ್ಕ್, ಮೈಕ್ ಹಸ್ಸಿ ಕೂಡಾ ಅನುಮಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ