ಜಹೀರ್ ಖಾನ್ ಬಳಿ ಪತ್ನಿಯಿಂದ ಸ್ವಲ್ಪ ದಿನವಾದರೂ ದೂರವಿರು ಎಂದು ಸಲಹೆ ಕೊಟ್ಟ ಹರ್ಭಜನ್ ಸಿಂಗ್!

ಶನಿವಾರ, 1 ಡಿಸೆಂಬರ್ 2018 (09:26 IST)
ಮುಂಬೈ: ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಎಂದರೆ ಟೀಂ ಇಂಡಿಯಾ ಆಟಗಾರರ ಪಾಲಿಗೆ ತರ್ಲೆ ಎಂದೇ ಪ್ರಖ್ಯಾತರು. ಅವರೀಗ ತಮ್ಮ ಒಂದು ಕಾಲದ ಸಹ ಕ್ರಿಕೆಟಿಗ ಜಹೀರ್ ಖಾನ್ ಗೆ ಪತ್ನಿಯಿಂದ ಸ್ವಲ್ಪ ದಿನ ದೂರವಿರು ಎಂಬ ತರ್ಲೆ ಐಡಿಯಾ ಕೊಟ್ಟಿದ್ದಾರೆ!


ನೇಹಾ ಧುಪಿಯಾ ಜತೆಗಿನ ಟಾಕ್ ಶೋ ಒಂದರಲ್ಲಿ ಹರ್ಭಜನ್ ಸಿಂಗ್ ತಮ್ಮ ಸ್ನೇಹಿತರಿಗೆಲ್ಲಾ ವೈವಾಹಿಕ ಜೀವನದ ಒಳಿತಿಗಾಗಿ ಒಳ್ಳೆಯ ಐಡಿಯಾ ಕೊಟ್ಟಿದ್ದಾರೆ!

ಟೀಂ ಇಂಡಿಯಾದ ಮೋಸ್ಟ್ ವಾಂಟೆಡ್‍ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜತೆಗೆ ಏನೇ ಆದರೂ ಒಬ್ಬರ ಬೆಂಬಲಕ್ಕೆ ಒಬ್ಬರು ನಿಂತಿರಬೇಕು. ಎಂತಹಾ ಸಂದರ್ಭ ಬಂದರೂ ಕೈ ಬಿಡಬೇಡಿ ಎಂದು ಸಲಹೆ ಕೊಟ್ಟಿದ್ದಾರೆ.

ಇನ್ನು, ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ದಂಪತಿಗೆ ಇನ್ನು ಸ್ವಲ್ಪ ಹೆಚ್ಚು ಸಮಯ ಜತೆಯಾಗಿ ಕಳೆಯಲು ಬಿಡುವು ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಆದರೆ ತಮ್ಮ ಸ್ನೇಹಿತ ಜಹೀರ್ ಖಾನ್ ಗೆ ಮಾತ್ರ ಪತ್ನಿ ಸಾಗರಿಕಾ ಘಾಟೆಯಿಂದ ಕೆಲ ಹೊತ್ತು ಆದರೂ ದೂರವಿದ್ದು ಸಮಯ ಕಳೆಯಲು ಸಲಹೆ ಕೊಟ್ಟಿದ್ದಾರೆ! ಯಾವತ್ತೂ ಪತ್ನಿ ಜತೆಗೇ ಸುತ್ತಾಡುವ ಸ್ನೇಹಿತನಿಗೆ ಭಜಿ ಈ ರೀತಿ ಕಿಚಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ