ಪರ್ವಾಗಿಲ್ಲ ಬಿಡು ಎಂದು ಸನ್ನೆ ಮಾಡಿ ಸಿಕ್ಸರ್ ಸಿಡಿಸಿದ ಹಾರ್ದಿಕ್: ದಿನೇಶ್ ಕಾರ್ತಿಕ್ ಮಾಡಿದ್ದೇನು ಗೊತ್ತಾ?
ಕೊನೆಯ ಓವರ್ ನ ಮೊದಲ ಎಸೆತದಲ್ಲಿ ರವೀಂದ್ರ ಜಡೇಜಾ ಔಟಾದಾಗ ಪಂದ್ಯಕ್ಕೆ ಟ್ವಿಸ್ಟ್ ಸಿಗಬಹುದೇನೋ ಎಂಬ ಆತಂಕವಿತ್ತು. ಎರಡನೇ ಬಾಲ್ ನಲ್ಲಿ ದಿನೇಶ್ ಕಾರ್ತಿಕ್ ಸಿಂಗಲ್ ತೆಗೆದು ಹಾರ್ದಿಕ್ ಗೆ ಸ್ಟ್ರೈಕ್ ನೀಡಿದರು.
ಆದರೆ ಮೂರನೇ ಎಸೆತದಲ್ಲಿ ರನ್ ಬರಲಿಲ್ಲ. ಆಗ ಎಲ್ಲರ ಆತಂಕ ಮತ್ತಷ್ಟು ಹೆಚ್ಚಾಯ್ತು. ಆದರೆ ಹಾರ್ದಿಕ್ ಮಾತ್ರ ಕೂಲ್ ಆಗಿದ್ದರು. ಇನ್ನೊಂದೆಡೆ ಟೆನ್ ಷನ್ ಮಾಡಿಕೊಂಡು ನಿಂತಿದ್ದ ದಿನೇಶ್ ಕಾರ್ತಿಕ್ ರತ್ತ ಪರ್ವಾಗಿಲ್ಲ ಬಿಡು ಎಂದು ಸನ್ನೆ ಮಾಡಿದರು. ನಾಲ್ಕನೇ ಎಸೆತದಲ್ಲಿ ಯಾವುದಕ್ಕೂ ಅವಕಾಶವೇ ಕೊಡದೇ ಸಿಕ್ಸರ್ ಸಿಡಿಸಿದರು. ಪಂದ್ಯ ಟೀಂ ಇಂಡಿಯಾ ಪಾಲಾಯಿತು. ಹಾರ್ದಿಕ್ ರ ಸಿಕ್ಸರ್ ನಿಂದ ಸಂತೋಷದಿಂದ ದಿನೇಶ್ ಕಾರ್ತಿಕ್ ಓಡಿ ಬಂದು ಬ್ರಾವೋ ಎಂದು ನಡು ಬಾಗಿಸಿ ನಮಸ್ಕರಿಸಿ ತಮ್ಮ ಗೌರವ ಸಲ್ಲಿಸಿದರು.