ಕಿರುಕುಳ ಕೊಟ್ಟನೆಂದು ಆರೋಪಿಸಿದ ಮೇಲೂ ಪತಿ ಮೊಹಮ್ಮದ್ ಶಮಿ ನೋಡಲು ಪತ್ನಿ ಹಸೀನ್ ಕಾತರ
ಮೊಹಮ್ಮದ್ ಶಮಿ ಮೊನ್ನೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಇದೀಗ ಪತಿ ಭೇಟಿಗಾಗಿ ಹಸೀನ್ ತಮಗೆ ಹಾಗೂ ತಮ್ಮ ಪುತ್ರಿಗೆ ಓಪನ್ ಟಿಕೆಟ್ ಖರೀದಿಸಿದ್ದಾರಂತೆ. ಆದರೆ ಹಸೀನ್ ಗೆ ಇದೀಗ ಶಮಿ ಎಲ್ಲಿದ್ದಾರೆಂಬ ಮಾಹಿತಿಯಿಲ್ಲ. ಈ ಬಗ್ಗೆ ಶಮಿ ಕುಟುಂಬದವರೂ ಯಾವುದೇ ಮಾಹಿತಿ ಬಿಟ್ಟುಕೊಡುತ್ತಿಲ್ಲ ಎಂದು ಹಸೀನ್ ಪರ ವಕೀಲರು ಮಾಧ್ಯಮಗಳಿಗೆ ಹೇಳಿದ್ದಾರೆ.
ಎಷ್ಟೇ ಕಿರುಕುಳ ಆರೋಪ ಹೊರಿಸಿದ್ದರೂ ತನ್ನ ಪತಿಗೆ ದೈಹಿಕವಾಗಿ ಗಾಯವಾಗುವುದು ಬೇಕಾಗಿರಲಿಲ್ಲ ಎಂದು ಹಸೀನ್ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವುದಾಗಿಯೂ ವರದಿಯಾಗಿದೆ. ಡೆಹ್ರಾಡೂನ್ ನಲ್ಲಿ ಭಾನುವಾರ ಶಮಿ ಅಪಘಾತಕ್ಕೀಡಾಗಿ ತಲೆಗೆ ಪೆಟ್ಟು ಮಾಡಿಕೊಂಡಿದ್ದರು.