ವಿರಾಟ್ ಕೊಹ್ಲಿಯ ಖಾಸಗಿ ವಿಡಿಯೋ ಮಾಡಿದ ಹೋಟೆಲ್ ಸಿಬ್ಬಂದಿ ವಜಾ

ಮಂಗಳವಾರ, 1 ನವೆಂಬರ್ 2022 (09:59 IST)
ಪರ್ತ್: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಖಾಸಗಿ ಕೊಠಡಿಯ ವಿಡಿಯೋ ವೈರಲ್ ಮಾಡಿದ್ದ ಹೋಟೆಲ್ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ.

ಪರ್ತ್ ನ ಕ್ರೌನ್ ಪರ್ತ್ ಹೋಟೆಲ್ ನಲ್ಲಿ ಘಟನೆ ನಡೆದಿತ್ತು. ಟಿ20 ವಿಶ್ವಕಪ್ ಆಡಲು ಇಲ್ಲಿ ವಾಸ್ತವ್ಯವಿರುವ ಕೊಹ್ಲಿಯ ಖಾಸಗಿ ಕೊಠಡಿಯೊಳಗೆ ಅನುಮತಿಯಿಲ್ಲದೇ ಪ್ರವೇಶಿಸಿದ ಹೋಟೆಲ್ ಸಿಬ್ಬಂದಿಯೊಬ್ಬರು ವಿಡಿಯೋ ಮಾಡಿದ್ದಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಯಬಿಟ್ಟಿದ್ದರು.

ಇದು ಕೊಹ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದು ನನ್ನ ಖಾಸಗಿತನಕ್ಕೆ ಆದ ಧಕ್ಕೆ. ನಾವು ಮನರಂಜನೆಯ ವಸ್ತುಗಳಲ್ಲ. ಇಂತಹ ವರ್ತನೆಯನ್ನು ಸಹಿಸುವುದಿಲ್ಲ ಎಂದು ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಈಗ ಕ್ರೌನ್ ಪರ್ತ್ ಹೋಟೆಲ್ ಮ್ಯಾನೇಜ್ ಮೆಂಟ್ ವಿಡಿಯೋ ಮಾಡಿದ್ದ ಸಿಬ್ಬಂದಿಯನ್ನು ಇದೀಗ ವಜಾ ಮಾಡಿದ್ದಾರೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ