ಟಿ20 ವಿಶ್ವಕಪ್: ಪಾಕ್ ಕನಸಿಗೆ ತಣ್ಣೀರೆರಚಿದ ಟೀಂ ಇಂಡಿಯಾ, ಸೆಮಿಫೈನಲ್ ಲೆಕ್ಕಾಚಾರ ಹೇಗಿದೆ?

ಸೋಮವಾರ, 31 ಅಕ್ಟೋಬರ್ 2022 (09:07 IST)
ಪರ್ತ್: ದ.ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಸೋತಿರುವುದರಿಂದ ಪಾಕಿಸ್ತಾನದ ಸೆಮಿಫೈನಲ್ ಆಸೆ ಕ್ಷೀಣವಾಗಿದೆ. ಇದೀಗ ಭಾರತವೂ ಸೆಮಿಫೈನಲ್ ಗಾಗಿ ಇನ್ನೊಂದು ಗೆಲುವು ಕಾಣಬೇಕಾಗಿದೆ.

ಒಂದು  ವೇಳೆ ಆಫ್ರಿಕಾ ವಿರುದ್ಧ ಭಾರತ ಗೆದ್ದಿದ್ದರೆ ಪಾಕ್ ಸೆಮಿಫೈನಲ್ ಆಸೆ ಜೀವಂತವಾಗಿರುತ್ತಿತ್ತು. ನಿನ್ನೆಯ ಪಂದ್ಯವನ್ನು ಪಾಕ್ ನೆದರ್ಲ್ಯಾಂಡ್ಸ್ ವಿರುದ್ಧ ಗೆದ್ದಿತ್ತು. ಹೀಗಾಗಿ ಒಂದು ವೇಳೆ ಭಾರತ ಗೆದ್ದಿದ್ದರೆ ಪಾಕ್ ಕೂಡಾ ಸೆಮಿಫೈನಲ್ ರೇಸ್ ನಲ್ಲಿರುತ್ತಿತ್ತು.

ಆದರೆ ಈಗ ಭಾರತ ಸೋತಿರುವುದರಿಂದ ಈಗ ಬಾಂಗ್ಲಾದೇಶದ ವಿರುದ್ಧದ ಪಂದ್ಯ ಮಹತ್ವದ್ದಾಗಿದೆ. ಟೀಂ ಇಂಡಿಯಾ ಈ ಪಂದ್ಯವನ್ನು ಗೆದ್ದರೆ ಪಾಕ್ ಖಾಯಂ ಆಗಿ ಕೂಟದಿಂದ ಹೊರಬೀಳಲಿದ್ದು, ಭಾರತ ಸೆಮಿಫೈನಲ್ ಗೇರುವುದು ಖಚಿತವಾಗಲಿದೆ. ಟೀಂ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವೆ ನೆಟ್ ರನ್ ರೇಟ್ ಹೆಚ್ಚು ವ್ಯತ್ಯಾಸವಿಲ್ಲದಿರುವ ಕಾರಣ ಭಾರತಕ್ಕೆ ಮುಂದಿನ ಪಂದ್ಯಗಳಲ್ಲಿ ದೊಡ್ಡ ಅಂತರದ ಗೆಲುವು ಬೇಕು. ಮರುದಿನ ನಡೆಯಲಿರುವ ಪಾಕಿಸ್ತಾನ-ದ.ಆಫ್ರಿಕಾ ನಡುವಿನ ಪಂದ್ಯದಲ್ಲಿ ಆಫ್ರಿಕಾ ಗೆದ್ದರೆ ಬಿ ಗುಂಪಿನ ಅಗ್ರ ತಂಡಗಳಾಗಿ ಆಫ್ರಿಕಾ ಮತ್ತು ಟೀಂ ಇಂಡಿಯಾ ಸೆಮಿಫೈನಲ್ ಗೇರಬಹುದು.


-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ