ಸ್ಟಾರ್ ಬೌಲರ್ ಎಂದು ಮೆರೆಯುತ್ತಿದ್ದ ಮಿಚೆಲ್ ಸ್ಟಾರ್ಕ್ ರನ್ನು ಗಲ್ಲಿ ಬೌಲರ್ ನಂತೆ ಟ್ರೀಟ್ ಮಾಡಿದ ರೋಹಿತ್ ಶರ್ಮಾ

Krishnaveni K

ಮಂಗಳವಾರ, 25 ಜೂನ್ 2024 (09:49 IST)
ಸೈಂಟ್ ಲೂಸಿಯಾ: ಆಸ್ಟ್ರೇಲಿಯಾ ವಿರುದ್ಧದ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ರನ್ನು ಗಲ್ಲಿ ಬೌಲರ್ ನಂತೆ ಟ್ರೀಟ್ ಮಾಡಿದರು.

ರೋಹಿತ್ ಶರ್ಮಾ ಸಿಡಿದು ನಿಂತರೆ ಎಷ್ಟು ಅಪಾಯಕಾರಿ ಎಂದು ಎಲ್ಲರಿಗೂ ಗೊತ್ತು. ಅದರಲ್ಲೂ ಆರಂಭಿಕ ಸ್ಪೆಲ್ ಗಳಲ್ಲಿ ವೇಗಿಗಳಿಗೆ ನಿರಾಯಾಸವಾಗಿ ಸಿಕ್ಸರ್ ಬಾರಿಸುವ ಛಾತಿ ಇರುವ ಆಟಗಾರ ರೋಹಿತ್. ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಒಂದೇ ಓವರ್ ನಲ್ಲಿ ರೋಹಿತ್ ನಾಲ್ಕು ಸಿಕ್ಸರ್ ಒಂದು ಬೌಂಡರಿ ಸಹಿತ 29 ರನ್ ಚಚ್ಚಿದರು.

ಕಳೆದ ಬಾರಿ ಸ್ಟಾರ್ಕ್ ದುಬಾರಿ ರನ್ ನೀಡಿದ್ದ 2021 ರ ಟಿ20 ವಿಶ್ವಕಪ್ ಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ. ಅಂದು ಅವರು ಒಂದು ಓವರ್ ನಲ್ಲಿ 22 ರನ್ ನೀಡಿದ್ದರು. ಆದರೆ ಇಂದು ರೋಹಿತ್ ಆ ದಾಖಲೆಯನ್ನು ಅಳಿಸಿ ಹಾಕುವಂತೆ ಮಾಡಿದರು. ಈ ಓವರ್ ನಲ್ಲಿ ಒಂದು ವೈಡ್ ಕೂಡಾ ಸೇರಿತ್ತು.

ಸ್ಟಾರ್ ವೇಗಿ ಎಂದು ಮೆರೆದಾಡುತ್ತಿದ್ದ ಸ್ಟಾರ್ಕ್ ರನ್ನು ಅಕ್ಷರಶಃ ಗಲ್ಲಿ ಬೌಲರ್ ನಂತೆ ಟ್ರೀಟ್ ಮಾಡಿದ ರೋಹಿತ್ ಯದ್ವಾ ತದ್ವಾ ರನ್ ಚಚ್ಚಿದರು. ಅಲ್ಲದೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 200 ಸಿಕ್ಸರ್ ಸಿಡಿಸಿದ ದಾಖಲೆಯನ್ನೂ ಮಾಡಿದರು. ಮಳೆಯ ನಡುವೆ ಪಂದ್ಯ ನಡೆದಿದ್ದರಿಂದ ಭಾರತ ವೇಗವಾಗಿ ರನ್ ಗಳಿಸಬೇಕಿತ್ತು. ಜೊತೆಗೆ ಆರಂಭಿಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೂ ರೋಹಿತ್ ಎದೆಗುಂದದೇ ತಮ್ಮ ಶೈಲಿಯ ಆಟವಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ