ಹೊಸಬರು ತಂಡಕ್ಕೆ ಬಂದರೆ ವಿರಾಟ್ ಕೊಹ್ಲಿ ಏನು ಮಾಡ್ತಾರೆ ಗೊತ್ತಾ?
‘ನಾನು ಒಬ್ಬ ಹಿರಿಯ ಕ್ರಿಕೆಟಿಗ ಎಂದು ವರ್ತಿಸುವುದೇ ಇಲ್ಲ. ನಾನು ಹಾಗೆ ಅಂದುಕೊಳ್ಳುವುದೇ ಇಲ್ಲ. ಇತರರ ಜತೆಗೂ ಹಾಗೇ ಇರುತ್ತೇನೆ. ಹೊಸ ಕ್ರಿಕೆಟಿಗರು ತಂಡಕ್ಕೆ ಬಂದಾಗ ನನ್ನ ಬಳಿ ಏನನ್ನೋ ಹೇಳಲು ಭಾರೀ ಗೌರವ ಕೊಟ್ಟುಕೊಂಡು ಗಂಭೀರವಾಗಿ ಹೇಳುತ್ತಿದ್ದರೆ ನಾನು ಜೋಕ್ ಮಾಡುತ್ತೇನೆ. ಇಷ್ಟೊಂದು ಗಂಭೀರವಾಗಿ ಇರಬೇಕಾಗಿಲ್ಲ ಎಂದು ಏನಾದರೂ ಜೋಕ್ ಮಾಡಿ ಅವರನ್ನು ಸಹಜವಾಗಿರಲು ಪ್ರಯತ್ನಿಸುತ್ತೇನೆ. ನನಗೆ ತಮ್ಮೊಳಗೇ ಮುಚ್ಚಿಟ್ಟುಕೊಳ್ಳದೇ ಎಲ್ಲವನ್ನೂ ಹಂಚಿಕೊಳ್ಳುವ ಆಟಗಾರರು ಇಷ್ಟ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.