ನಮ್ಮ ಬಳಿ ಅನುಭವಿ ಆಟಗಾರರಿದ್ದರೂ ಗೆಲ್ಲಲಾಗಲಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಜಿಂಬಾಬ್ವೆಯ ನೀರಸ ಪ್ರದರ್ಶನದಿಂದ ಕೆಲವು ಬೆಂಬಲಿಗರು ಆಟಗಾರರ ವಿರುದ್ಧ ಪ್ರತಿಭಟನೆ ನಡೆಸಿದರು. ಭಾರತದ ಚೇಸ್‌ನ ಆರಂಭದ ಹಂತಗಳಲ್ಲಿ ಬ್ಯಾನರ್‌ಗಳನ್ನು ಹಿಡಿದು ಸೀಟಿಗಳನ್ನು ಊದಿದರು. ಒಂದು ಭಿತ್ತಿಪತ್ರದಲ್ಲಿ ''ನಾವು ಮಹಾ ಪ್ರಮಾಣದ ವಿನಾಶವನ್ನು, ಪ್ರಕೋಪವನ್ನು ಬೆಂಬಲಿಸುವುದಿಲ್ಲ'' ಎಂದು ಬರೆದಿತ್ತು.