ನಾನು ರೋಬೋಟ್ ಅಲ್ಲ, ದೇಹ ಬಯಸಿದಾಗ ವಿಶ್ರಾಂತಿ ಪಡೆಯುತ್ತೇನೆ: ವಿರಾಟ್ ಕೊಹ್ಲಿ

ಬುಧವಾರ, 15 ನವೆಂಬರ್ 2017 (15:42 IST)
ನಾನು ರೋಬೋಟ್ ಅಲ್ಲ. ನನ್ನ ದೇಹಕ್ಕೆ ಯಾವಾಗ ವಿಶ್ರಾಂತಿ ಬೇಕನಿಸುತ್ತದೆಯೋ ಆವಾಗ ವಿಶ್ರಾಂತಿ ಪಡೆಯುತ್ತೇನೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಏಕದಿನ ಅಂತಾರಾಷ್ಟ್ರೀಯ ಸತತ ಸರಣಿ ಪಂದ್ಯಗಳನ್ನಾಡಿರುವ ವಿರಾಟ್, ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ನಂತರ ಆಯ್ಕೆ ಸಮಿತಿಗೆ ವಿಶ್ರಾಂತಿ ನೀಡುವಂತೆ ಕೋರಿದ್ದಾರೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಿದ್ದರು.  
 
ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್, ಎಲ್ಲಾ ವದಂತಿಗಳನ್ನು ತಳ್ಳಿಹಾಕಿ ಮೂರು ಟೆಸ್ಟ್ ಪಂದ್ಯಗಳನ್ನಾಡುವುದಾಗಿ ಕೊಹ್ಲಿ ಸ್ವತಃ ಹೇಳಿದ್ದರಿಂದ ಪಂದ್ಯವಾಳಿಯ ನಂತರವಷ್ಟೆ ಕೊಹ್ಲಿಯ ವಿಶ್ರಾಂತಿಯ ಬಗ್ಗೆ ಯೋಚಿಸಲಾಗುವುದು ಎಂದು ತಿಳಿಸಿದ್ದಾರೆ.
  
ಖಂಡಿತವಾಗಿ ನನಗೆ ವಿಶ್ರಾಂತಿಯ ಅಗತ್ಯವಿದೆ. ಏಕೆ ನನಗೆ ವಿಶ್ರಾಂತಿಯ ಅಗತ್ಯವಿರುವುದಿಲ್ಲ. ನನ್ನ ದೇಹ ವಿಶ್ರಾಂತಿ ಮಾಡಬೇಕು ಎಂದು ಭಾವಿಸಿದಾಗ, ವಿಶ್ರಾಂತಿಗಾಗಿ ಕೋರುತ್ತೇನೆ. ನಾನು ರೋಬೋಟ್ ಅಲ್ಲ, ನನ್ನ ದೇಹ ಚರ್ಮದಿಂದ ಕೂಡಿದೆ ಎನ್ನುವುದನ್ನು ಪರಿಶೀಲಿಸಬಹುದು ಎಂದು ಕೊಹ್ಲಿ ತಿಳಿಸಿದ್ದಾರೆ.
 
ಹಾರ್ದಿಕ್ ಪಾಂಡ್ಯ ಅವರಿಗೆ ಎರಡು ಟೆಸ್ಟ್ ಪಂದ್ಯಗಳಲ್ಲಿ ವಿಶ್ರಾಂತಿ ನೀಡಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕ್ರೀಡಾಂಗಣದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವವರಿಗೆ ವಿಶ್ರಾಂತಿಯ ಅಗತ್ಯವಿರುತ್ತದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ