ರೋಹಿತ್ ಶರ್ಮಾ ಮೇಲೆ ಐಸಿಸಿ ಕೆಂಗಣ್ಣು
ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಒಂದೂವರೆ ದಿನದಲ್ಲೇ ಮುಗಿದಿತ್ತು. ಇದಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಶರ್ಮಾ ಪಿಚ್ ಬಗ್ಗೆ ಮಾತನಾಡಿದ್ದರು.
ಈ ವೇಳೆ ಇದೇ ರೀತಿಯ ಪಿಚ್ ಭಾರತದಲ್ಲಿ ಮಾಡಿದ್ದರೆ ಎಲ್ಲರೂ ಪಿಚ್ ಸರಿ ಇಲ್ಲ ಎನ್ನುತ್ತಿದ್ದರು. ಐಸಿಸಿ ಕೂಡಾ ಭಾರತದಲ್ಲಿ ಸ್ಪಿನ್ ಪಿಚ್ ನಲ್ಲಿ ಈ ರೀತಿ ಪಂದ್ಯ ಬೇಗನೇ ಮುಗಿದರೆ ಕಳಪೆ ರೇಟಿಂಗ್ ಕೊಡುತ್ತದೆ. ಐಸಿಸಿ ಮೊದಲು ಈ ತಾರತಮ್ಯ ನೀತಿ ಬಿಡಬೇಕು ಎಂದು ಬಹಿರಂಗವಾಗಿಯೇ ಕಿಡಿ ಕಾರಿದ್ದರು.
ಇದೀಗ ರೋಹಿತ್ ಹೇಳಿಕೆ ಬಗ್ಗೆ ಗರಂ ಆಗಿರುವ ಐಸಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಾಧ‍್ಯತೆಯಿದೆ. ರೋಹಿತ್ ಗೆ ಯಾವ ರೀತಿ ಶಿಕ್ಷೆಯಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.