ಏರ್ ಪೋರ್ಟ್ ನಲ್ಲಿ ನೆಲದ ಮೇಲೆ ಮಲಗಿ ನಿದ್ರಿಸಿದ ಕ್ರಿಕೆಟಿಗ ಅರ್ಷ್ ದೀಪ್ ಸಿಂಗ್
ಇದು ಯಾವಾಗ ತೆಗೆದ ಫೋಟೋ ಗೊತ್ತಿಲ್ಲ. ಆದರೆ ಫೋಟೋ ನೋಡಿದರೆ ಇತ್ತೀಚೆಗೆ ತೆಗೆದ ಫೋಟೋದಂತಿದೆ. ವಿಮಾನ ನಿಲ್ದಾಣದಲ್ಲಿ ಚೇರ್ ನಡುವೆ ಇರುವ ಕಿರಿದಾದ ಜಾಗದಲ್ಲಿ ಬ್ಯಾಗ್ ನ್ನೇ ತಲೆದಿಂಬಾಗಿಸಿ ಅರ್ಷ್ ದೀಪ್ ಸಿಂಗ್ ಮಲಗಿ ನಿದ್ರಿಸುತ್ತಿದ್ದಾರೆ.
ಈ ಫೋಟೋವನ್ನು ನೋಡಿ ನೆಟ್ಟಿಗರು ಟೀಂ ಇಂಡಿಯಾ ಕ್ರಿಕೆಟಿಗನಾದರೂ ಎಷ್ಟು ಸಿಂಪಲ್ ಎಂದು ಹೊಗಳಿದ್ದಾರೆ. ಒಂದು ಹಂತ ತಲುಪಿದ ಮೇಲೆ ಜನರು ನೆಲದ ಮೇಲೆ ಕೂರುವುದೂ ಅಭಿಮಾನ ಭಂಗ ಎಂದುಕೊಳ್ಳುತ್ತಾರೆ. ಅಂತಹದ್ದರಲ್ಲಿ ಅರ್ಷ್ ದೀಪ್ ಸಿಂಗ್ ಯಶಸ್ಸನ್ನು ತಲೆಗೇರಿಸಿಕೊಂಡಿಲ್ಲ ಎನ್ನುವುದಕ್ಕೆ ಇದುವೇ ಸಾಕ್ಷಿ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.
ಇತ್ತೀಚೆಗೆ ನಡೆದಿದ್ದ ದ.ಆಫ್ರಿಕಾ ವಿರುದ್ಧ ಟಿ20, ಏಕದಿನ ಸರಣಿಯಲ್ಲಿ ಅರ್ಷ್ ದೀಪ್ ಸಿಂಗ್ ಗಮನಾರ್ಹ ಬೌಲಿಂಗ್ ಪ್ರದರ್ಶನ ನೀಡಿದ್ದರು.