ಬರೊಬ್ಬರಿ 32 ವರ್ಷಗಳ ಬಳಿಕ ಭಾರತ-ಪಾಕ್ ಏಕದಿನ ಸರಣಿ ಫೈನಲ್ ಪಂದ್ಯದಲ್ಲಿ ಮುಖಾಮುಖಿ

ಭಾನುವಾರ, 18 ಜೂನ್ 2017 (10:53 IST)
ಲಂಡನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬರೊಬ್ಬರಿ 32 ವರ್ಷಗಳ ಬಳಿಕ ಭಾರತ ಮತ್ತು ಪಾಕಿಸ್ತಾನ ತಂಡಗಳು ಏಕದಿನ ಮಾದರಿಯ ಮಾದರಿಯ ಕ್ರಿಕೆಟ್  ಸರಣಿ  ಫೈನಲ್ ನಲ್ಲಿ ಮುಖಾಮುಖಿಯಾಗಲಿವೆ.
 
ಹಿಂದೆ  2007ರ ಟಿ20 ವಿಶ್ವಕಪ್‌ ಫೈನಲ್‌ ನಲ್ಲಿ ಉಭಯ ತಂಡಳು ಭೇಟಿಯಾಗಿತ್ತಾದರೂ, ಏಕದಿನ ಮಾದರಿಯ ಕ್ರಿಕೆಟ್ ನಲ್ಲಿ 32 ವರ್ಷಗಳ ಬಳಿಕ ಭಾರತ ಮತ್ತು ಪಾಕಿಸ್ತಾನ ತಂಡಗಳು ಇದೇ ಮೊದಲ ಬಾರಿಗೆ  ಎದುರಾಗುತ್ತಿವೆ. ಕೊನೆಯ ಬಾರಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು 1985ರಲ್ಲಿ ನಡೆದ ವಿಶ್ವ ಚಾಂಪಿಯನ್‌ ಶಿಪ್‌ ಫೈನಲ್‌ನಲ್ಲಿ ಕಾದಾಡಿದ್ದವು. ಆ ಪಂದ್ಯಾವಳಿಯಲ್ಲೂ ಭಾರತ, ಮೊದಲ ಪಂದ್ಯದಲ್ಲಿ  ಪಾಕಿಸ್ತಾನವನ್ನು ಮಣಿಸಿತ್ತು. ಆನಂತರ ಫೈನಲ್‌ ನಲ್ಲೂ ಗೆಲುವು ಪಡೆದಿತ್ತು.
 
ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲೂ ಭಾರತ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಗೆಲುವು ಸಾಧಿಸಿದ್ದು, ಮತ್ತೆ ಫೈನಲ್ ನಲ್ಲಿ ಪಾಕಿಸ್ತಾನ ತಂಡವನ್ನು  ಎದುರಿಸುತ್ತಿರುವುದು ವಿಶೇಷ.
 

ವೆಬ್ದುನಿಯಾವನ್ನು ಓದಿ