ಐಸಿಸಿ ಮುಖ್ಯಸ್ಥರು ಯಾರು? ಒಮ್ಮತಕ್ಕೆ ಬಾರದ ಸದಸ್ಯರು

ಮಂಗಳವಾರ, 11 ಆಗಸ್ಟ್ 2020 (11:25 IST)
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಮುಖ್ಯಸ್ಥರು ಯಾರು ಎಂಬ ಕುರಿತು ಒಮ್ಮತದ ಅಭಿಪ್ರಾಯಕ್ಕೆ ಬರಲು ಐಸಿಸಿ ಸದಸ್ಯರು ವಿಫಲರಾಗಿದ್ದಾರೆ.


ಶಶಾಂಕ್ ಮನೋಹರ್ ರಿಂದ ತೆರವಾದ ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ಹೊಸ ಮುಖ್ಯಸ್ಥರನ್ನು ಆಯ್ಕೆ ಮಾಡಲು ನಿನ್ನೆ ಸಭೆ ನಡೆಸಲಾಗಿತ್ತು. ಆದರೆ ಈ ಸಭೆಯಲ್ಲಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸದಸ್ಯರಿಗೆ ಸಾಧ‍್ಯವಾಗಿಲ್ಲ.

ಇದೀಗ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ತಲೆನೋವು ಐಸಿಸಿಯದ್ದಾಗಿದೆ. ಒಂದು ವೇಳೆ ಸೌರವ್ ಗಂಗೂಲಿ ನಾಮಪತ್ರ ಸಲ್ಲಿಸಿದರೆ ಅವರಿಗೆ ಬೆಂಬಲ ಸಿಗುವುದರಲ್ಲಿ ಸಂಶಯವಿಲ್ಲ. ಆದರೆ ಅವರಿನ್ನೂ ಈ ಬಗ್ಗೆ ನಿರ್ಧಾರ ತಳೆದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ