ಐಸಿಸಿ ಮುಖ್ಯಸ್ಥರ ಆಯ್ಕೆ ಇಂದು: ಗಂಗೂಲಿಗೆ ಒಲಿಯುತ್ತಾ ಅದೃಷ್ಟ?

ಸೋಮವಾರ, 10 ಆಗಸ್ಟ್ 2020 (12:54 IST)
ದುಬೈ: ಭಾರತೀಯ ಮೂಲದ ಶಶಾಂಕ್ ಮನೋಹರ್ ಅವರಿಂದ ತೆರವಾದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮುಖ್ಯಸ್ಥ ಸ್ಥಾನಕ್ಕೆ ಅಭ್ಯರ್ಥಿಯ ಆಯ್ಕೆ ಸಭೆ ಇಂದು ನಡೆಯಲಿದೆ.


ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಆಯ್ಕೆಗೆ ಚುನಾವಣೆ ನಡೆಸುವ ಬಗ್ಗೆ ಇಂದು ಚರ್ಚೆ ನಡೆಯಲಿದೆ. ಮೂಲಗಳ ಪ್ರಕಾರ ಬಿಸಿಸಿಐ ಅಧ‍್ಯಕ್ಷರಾಗಿರುವ ಸೌರವ್ ಗಂಗೂಲಿ ಕೂಡಾ ಸ್ಪರ್ಧಿಸುವ ಸಾಧ‍್ಯತೆ.

ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯಲು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದಕ್ಕೆ ತಕರಾರುಗಳು ಬಂದಿದ್ದು, ಗಂಗೂಲಿಗೆ ಮುಂದುವರಿಯಲು ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಹೀಗಾಗಿ ನೇರವಾಗಿ ಗಂಗೂಲಿ ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ಸ್ಪರ್ಧಿಸಿದರೂ ಅಚ್ಚರಿಯಿಲ್ಲ. ಗಂಗೂಲಿ ಸ್ಪರ್ಧೆಗೆ ಭಾರೀ ಬೆಂಬಲವೂ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ