ವಿಶ್ವ ಕ್ರಿಕೆಟ್ ನಲ್ಲಿ ಪಾಕ್ ಮೂಲೆಗುಂಪು ಮಾಡುವ ಬಿಸಿಸಿಐ ಯೋಜನೆಗೆ ಒಪ್ಪದ ಐಸಿಸಿ

ಸೋಮವಾರ, 4 ಮಾರ್ಚ್ 2019 (09:09 IST)
ದುಬೈ: ಭಯೋತ್ಪಾದಕರಿಗೆ ಬೆಂಬಲ ನೀಡುವ ಪಾಕಿಸ್ತಾನವನ್ನು ವಿಶ್ವ ಕ್ರಿಕೆಟ್ ನಿಂದ ಮೂಲೆಗುಂಪು ಮಾಡಬೇಕೆಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಾಡುತ್ತಿರುವ ಪ್ರಯತ್ನಕ್ಕೆ ಐಸಿಸಿ ತಣ್ಣೀರೆರಚಿದೆ.


ವಿಶ್ವಕಪ್ ಸೇರಿದಂತೆ ಇತರ ಕ್ರಿಕೆಟ್ ಸರಣಿಗಳಲ್ಲಿ ಪಾಕ್ ಜತೆ ಆಡದಂತೆ ಐಸಿಸಿ ತನ್ನ ಸದಸ್ಯ ರಾಷ್ಟ್ರಗಳಿಗೆ ತಿಳಿಸಬೇಕು ಎಂದು ಬಿಸಿಸಿಐ ಮನವಿ ಮಾಡಿತ್ತು. ಆದರೆ ಈ ಮನವಿಯನ್ನು ಐಸಿಸಿ ತಿರಸ್ಕರಿಸಿದೆ.

‘ಎರಡು ದೇಶಗಳ ನಡುವೆ ಸರಣಿ ಆಡಬೇಕೇ ಬೇಡವೇ ಎಂದು ತೀರ್ಮಾನಿಸುವುದು ಐಸಿಸಿಯಲ್ಲ. ಇದು ಆಯಾ ಸರ್ಕಾರಗಳಿಗೆ ಬಿಟ್ಟಿದ್ದು. ಈ ವಿಚಾರದಲ್ಲಿ ಐಸಿಸಿ ಮೂಗು ತೂರಿಸುವುದಿಲ್ಲ’ ಎಂದು ಸ್ಪಷ್ಟವಾಗಿ ಬಿಸಿಸಿಐಗೆ ಹೇಳಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ