ಮನೆಗೆ ಬಾ ನೋಡ್ಕೋತೀನಿ: ವಿರಾಟ್ ಕೊಹ್ಲಿ ಔಟಾದಾಗ ಅನುಷ್ಕಾ ಶರ್ಮಾ ಪ್ರತಿಕ್ರಿಯೆ ವೈರಲ್
ಐದನೇ ಟೆಸ್ಟ್ ಪಂದ್ಯದಲ್ಲಿ ಕಳಪೆ ಫಾರ್ಮ್ ನಿಂದಾಗಿ ನಾಯಕ ರೋಹಿತ್ ಶರ್ಮಾ ಆಡುವ ಬಳಗದಿಂದ ಡ್ರಾಪ್ ಆಗಿದ್ದಾರೆ. ವಿರಾಟ್ ಕೊಹ್ಲಿ ಕೂಡಾ ಕಳಪೆ ಫಾರ್ಮ್ ನಲ್ಲಿದ್ದರೂ ಅವಕಾಶ ನೀಡಲಾಗಿದೆ.
ಆದರೆ ಕೊಹ್ಲಿ ಮತ್ತೆ ಅದೇ ರೀತಿ ಆಫ್ ಸ್ಟಂಪ್ ಆಚೆ ಹೋಗುವ ಚೆಂಡು ಕೆಣಕಲು ಹೋಗಿ ತಮ್ಮ ವಿಕೆಟ್ ಗಿಫ್ಟ್ ನೀಡಿದ್ದಾರೆ. ಈ ವೇಳೆ ಅವರು 69 ಬಾಲ್ ಎದುರಿಸಿ ಗಳಿಸಿದ್ದು ಕೇವಲ 17 ರನ್. ಔಟಾದಾಗ ಸಪ್ಪೆ ಮುಖ ಮಾಡಿಕೊಂಡು ಕೊಹ್ಲಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದರೆ ಇತ್ತ ಮೈದಾನದಲ್ಲಿ ಕೂತಿದ್ದ ಅನುಷ್ಕಾ ಶರ್ಮಾ ನೀಡಿದ್ದ ಪ್ರತಿಕ್ರಿಯೆ ವೈರಲ್ ಆಗಿದೆ.
ಮನೆಗೆ ಬಾ ನೋಡ್ಕೋತೀನಿ ಎನ್ನುವಂತೆ ಅನುಷ್ಕಾ ಹತಾಶೆಯ ಲುಕ್ ಕೊಟ್ಟಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೊತೆಗೆ ಅನುಷ್ಕಾ-ವಿರಾಟ್ ರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಟಿಪಿಕಲ್ ಪತ್ನಿಯರ ಲುಕ್ ಎಂದು ತಮಾಷೆ ಮಾಡಿದ್ದಾರೆ.