IND vs AUS: ನಾಲ್ಕು ವಿಕೆಟ್ ಕಿತ್ತು ಗಂಭೀರ್ ಮರ್ಯಾದೆ ಕಾಪಾಡಿದ ಹರ್ಷಿತ್ ರಾಣಾ

Krishnaveni K

ಶನಿವಾರ, 25 ಅಕ್ಟೋಬರ್ 2025 (12:39 IST)
Photo Credit: X
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ನಾಲ್ಕು ವಿಕೆಟ್ ಕಬಳಿಸಿದ ಹರ್ಷಿತ್ ರಾಣಾ ಕೋಚ್ ಗಂಭೀರ್ ಮಾನ ಉಳಿಸಿದ್ದಾರೆ.

ಇಂದಿನ ಪಂದ್ಯದಲ್ಲಿ ಅರ್ಷ್ ದೀಪ್ ಸಿಂಗ್ ರನ್ನು ಹೊರಗಿಟ್ಟು ಹರ್ಷಿತ್ ರಾಣಾ ಆಯ್ಕೆ ಮಾಡಿದ್ದಕ್ಕೆ ಕೋಚ್ ಗೌತಮ್ ಗಂಭೀರ್ ತೀವ್ರ ಟ್ರೋಲ್ ಗೊಳಗಾಗಿದ್ದರು. ಆದರೆ ಇಂದು ಗಂಭೀರ್ ನಿರ್ಧಾರ ಸಮರ್ಥಿಸುವಂತೆ ಆಡಿ ಹರ್ಷಿತ್ ರಾಣಾ ಭೇಷ್ ಎನಿಸಿಕೊಂಡರು.

ಇದೀಗ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿ 46.4 ಓವರ್ ಗಳಲ್ಲಿ 236 ರನ್ ಗಳಿಗೆ ಆಲೌಟ್ ಆಗಿದೆ. ಭಾರತದ ಪರ ಹರ್ಷಿತ್ ರಾಣಾ 4, ವಾಷಿಂಗ್ಟನ್ ಸುಂದರ್ 2, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಅಕ್ಸರ್ ಪಟೇಲ್ ಮತ್ತು ಪ್ರಸಿದ್ಧ ಕೃಷ್ಣ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು. ಆಸ್ಟ್ರೇಲಿಯಾ ಪರ ಮ್ಯಾಟ್ ರೇನ್ ಶೋ 56, ಮಿಚೆಲ್ ಮಾರ್ಷ್ 41, ಮ್ಯಾಥ್ಯೂ ಶಾರ್ಟ್ 30, ಟ್ರಾವಿಸ್ ಹೆಡ್ 29 ರನ್ ಗಳಿಸಿದರು. ಇದೀಗ ಭಾರತ ಗೆಲುವಿಗೆ 237 ರನ್ ಗಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ