IND vs AUS: ಅದ್ಭುತ ಕ್ಯಾಚ್ ಹಿಡಿದ ಶ್ರೇಯಸ್ ಅಯ್ಯರ್ ಆದ್ರೆ ಆಮೇಲೇನಾಯ್ತು video
ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಇತ್ತೀಚೆಗಿನ ವರದಿ ಬಂದಾಗ 45 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿದೆ. ಮ್ಯಾಟ್ ರೇನ್ ಶೋ 56 ರನ್ ಗಳಿಸಿದರು.
ಇನ್ನು ಈ ಪಂದ್ಯದಲ್ಲಿ ಹೈಲೈಟ್ ಆಗಿದ್ದು ಶ್ರೇಯಸ್ ಅಯ್ಯರ್ ಹಿಡಿದ ಅದ್ಭುತ ಕ್ಯಾಚ್. ಹರ್ಷಿತ್ ರಾಣಾ ಬೌಲಿಂಗ್ ನಲ್ಲಿ ಅಲೆಕ್ಸ್ ಕ್ಯಾರಿ ನೀಡಿದ ಕಷ್ಟಕರ ಕ್ಯಾಚ್ ನ್ನು ಶ್ರೇಯಸ್ ಅಯ್ಯರ್ ಓಡುತ್ತಾ ಹೋಗಿ ಹಿಡಿದಿದ್ದರು. ಆದರೆ ಈ ಕ್ಯಾಚ್ ಹಿಡಿಯುವ ಪ್ರಯತ್ನದಲ್ಲಿ ಅವರು ಅನಾಮತ್ತಾಗಿ ನೆಲಕ್ಕೆ ಬಿದ್ದರು.
ಬಿದ್ದ ಏಟಿಗೆ ಅವರಿಗೆ ಸೊಂಟದ ಬಳಿ ನಿಜಕ್ಕೂ ಏಟಾಗಿತ್ತು. ಕೊನೆಗೆ ಫಿಸಿಯೋ ಸಹಾಯದಿಂದ ಮೈದಾನದಿಂದ ಹೊರನಡೆದರು. ಹಾಗಿದ್ದರೂ ಬಾಲ್ ಮಾತ್ರ ನೆಲಕ್ಕೆ ಚೆಲ್ಲಲಿಲ್ಲ ಎನ್ನುವುದು ವಿಶೇಷ. ಈ ವಿಡಿಯೋ ಇಲ್ಲಿದೆ ನೋಡಿ.