IND vs AUS: ಪಂದ್ಯಕ್ಕೆ ರೋಚಕ ತಿರುವು ಕೊಟ್ಟ ಟೀಂ ಇಂಡಿಯಾ

Krishnaveni K

ಬುಧವಾರ, 18 ಡಿಸೆಂಬರ್ 2024 (09:57 IST)
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ಏಕಪಕ್ಷೀಯವಾಗಿ ಗೆಲ್ಲುವ ಸೂಚನೆಯಿತ್ತು. ಆದರೆ ನಿನ್ನೆಯಿಂದ ಅದ್ಭುತ ಪ್ರದರ್ಶನ ಕಾಯ್ದುಕೊಂಡ ಟೀಂ ಇಂಡಿಯಾಕ್ಕೆ ಟ್ವಿಸ್ಟ್ ಕೊಟ್ಟಿದೆ.

ನಿನ್ನೆ 9 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿ ಫಾಲೋ ಆನ್ ತಪ್ಪಿಸಿಕೊಂಡು ಟಿಂ ಇಂಡಿಯಾ ದಿನದಾಟ ಮುಗಿಸಿತ್ತು. ಇಂದು 260 ರನ್ ಗಳಿಗೆ ಆಲೌಟ್ ಆಗಿತ್ತು. ಇದರೊಂದಿಗೆ ಟೀಂ ಇಂಡಿಯಾ 185 ರನ್ ಗಳ ಹಿನ್ನಡೆ ಅನುಭವಿಸಿತು.

ಆದರೆ ದ್ವಿತೀಯ ಇನಿಂಗ್ಸ್ ನಲ್ಲಿ ಭಾರತೀಯ ಬೌಲರ್ ಗಳು ಆಸ್ಟ್ರೇಲಿಯಾಗೆ ಸರಿಯಾಗಿಯೇ ಏಟು ಕೊಟ್ಟಿದ್ದಾರೆ. ಆಸ್ಟ್ರೇಲಿಯಾ ಬ್ಯಾಟರ್ ಗಳನ್ನು ಉಸಿರೆತ್ತದಂತೆ ಮಾಡಿದ ಟೀಂ ಇಂಡಿಯಾ ತ್ರಿವಳಿ ವೇಗಿಗಳಾದ ಬುಮ್ರಾ, ಸಿರಾಜ್, ಆಕಾಶ್ ದೀಪ್ ರಿಂದಾಗಿ ಆಸೀಸ್ 89ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿತು. ಈ ವೇಳೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಮೊದಲ ಇನಿಂಗ್ಸ್ ನಲ್ಲಿ 185 ರನ್ ಗಳ ಮುನ್ನಡೆಯಿದ್ದಿದ್ದರಿಂದ ಆಸೀಸ್ ಭಾರತದ ಗೆಲುವಿಗೆ 275 ರನ್ ಗಳ ಗುರಿ ನೀಡಿತು. ಇದೀಗ ಭಾರತ ಉತ್ತಮ ಬ್ಯಾಟಿಂಗ್ ನಡೆಸಿದರೂ ಗೆಲುವು ಸಿಕ್ಕರೂ ಅಚ್ಚರಿಯಿಲ್ಲ. ಆದರೆ ಮೊದಲ ಇನಿಂಗ್ಸ್ ನಲ್ಲಿ ಮೈಮರೆತರೆ ಸೋಲುವ ಸಾಧ್ಯತೆಯೂ ಇದೆ. ಏನೇ ಆದರೂ ನೀರಸವಾಗಬೇಕಿದ್ದ ಪಂದ್ಯಕ್ಕೆ ಟೀಂ ಇಂಡಿಯಾ ಬೌಲರ್ ಗಳು ರೊಚಕತೆ ತಂದುಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ