IND vs AUS: ಓಯ್ ಕಾನ್ ಸ್ಟಾಸ್ ಬಾಲ್ ಕಾಣಿಸ್ತಿಲ್ವಾ: ಹಿಂದಿಯಲ್ಲೇ ಎದುರಾಳಿ ಕೆಣಕಿದ ಯಶಸ್ವಿ ಜೈಸ್ವಾಲ್ ವಿಡಿಯೋ
ಮೊದಲ ಇನಿಂಗ್ಸ್ ನಲ್ಲಿ ಭಾರತ 185 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತಿಯಾಗಿ ಆಸೀಸ್ ಕೇವಲ 181 ರನ್ ಗಳಿಗೆ ಆಲೌಟ್ ಆಗಿ 4 ರನ್ ಗಳ ಹಿನ್ನಡೆ ಅನುಭವಿಸಿತು. ಈ ಕ್ರೆಡಿಟ್ ಟೀಂ ಇಂಡಿಯಾ ಬೌಲರ್ ಗಳಿಗೆ ಸಲ್ಲಬೇಕು.
ನಾಯಕ ಜಸ್ಪ್ರೀತ್ ಬುಮ್ರಾ ಗಾಯಗೊಂಡು ಮೈದಾನದಿಂದ ಹೊರನಡೆದ ಬಳಿಕ ಕೊಹ್ಲಿ ಕ್ಯಾಪ್ಟನ್ ಜವಾಬ್ಧಾರಿ ನಿಭಾಯಿಸಿದ್ದು ಗಮನಾರ್ಹವಾಗಿತ್ತು. ಭಾರತ ಮೈದಾನದಲ್ಲಿ ಆಕ್ರಮಣಕಾರಿಯಾಗಿ ಆಡುತ್ತಿದೆ. ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ ಅದ್ಭುತವಾಗಿ ಬೌಲಿಂಗ್ ನಡೆಸಿದರು. ಬುಮ್ರಾ 2 ವಿಕೆಟ್ ಕಬಳಿಸಿದ್ದರೆ ಪ್ರಸಿದ್ಧ ಕೃಷ್ಣ ಮತ್ತು ಸಿರಾಜ್ ತಲಾ 3 ವಿಕೆಟ್ ಹಾಗೂ ನಿತೀಶ್ ರೆಡ್ಡಿ 2 ವಿಕೆಟ್ ಕಬಳಿಸಿ ಗಮನ ಸೆಳೆದರು.