IND vs ENG: ಪತ್ರಿಕಾಗೋಷ್ಠಿ ನಡುವೆ ರಿಪೋರ್ಟರ್ ಪತ್ನಿ ಕಾಲ್: ಬುಮ್ರಾ ರಿಯಾಕ್ಷನ್ ವಿಡಿಯೋ ನೋಡಿ
ಪ್ರತಿ ದಿನವೂ ಆಯಾ ದಿನದ ಬೆಸ್ಟ್ ಪ್ರದರ್ಶನ ನೀಡಿದ ಆಟಗಾರರ ಪತ್ರಿಕಾಗೋಷ್ಠಿ ನಡೆಯುತ್ತದೆ. ಅದೇ ರೀತಿ ನಿನ್ನೆ ಜಸ್ಪ್ರೀತ್ ಬುಮ್ರಾ ಐದು ವಿಕೆಟ್ ಪಡೆದ ಹಿನ್ನಲೆಯಲ್ಲಿ ದಿನದಾಟದ ಬಳಿಕ ಪತ್ರಿಕಾಗೋಷ್ಠಿಗೆ ಬಂದಿದ್ದಾರೆ.
ಬುಮ್ರಾ ಪತ್ರಕರ್ತರೊಬ್ಬರ ಪ್ರಶ್ನೆಗೆ ಗಂಭೀರವಾಗಿ ಉತ್ತರಿಸುತ್ತಿದ್ದರು. ಈ ವೇಳೆ ಟೇಬಲ್ ಮೇಲೆ ಪತ್ರಕರ್ತರೊಬ್ಬರ ಫೋನ್ ರಿಂಗ್ ಆಯ್ತು. ಬುಮ್ರಾ ಗಮನ ಅತ್ತ ಸರಿಯಿತು. ಫೋನ್ ಮೇಲೆ ವೈಫ್ ಎಂದು ಹೆಸರು ಬಂದಿದ್ದು ನೋಡಿ ಬುಮ್ರಾ ಮುಖದಲ್ಲಿ ನಗು ಮೂಡಿತು.
ಫೋನ್ ತೆಗೆದುಕೊಂಡು ನೋಡಿ ಯಾರದ್ದೋ ಪತ್ನಿ ಕರೆ ಮಾಡುತ್ತಿದ್ದಾರೆ. ಆದರೆ ನಾನು ಈ ಫೋನ್ ಅಟೆಂಡ್ ಮಾಡಲ್ಲ ಕಟ್ ಮಾಡ್ತೀನಿ. ಯಾಕೆಂದರೆ ಇದು ಪತ್ನಿಯ ಕಾಲ್ ಎಂದು ನಗು ನಗುತ್ತಾ ಕಟ್ ಮಾಡಿದರು. ಈ ಗಲಿಬಿಲಿಯಲ್ಲಿ ಅವರಿಗೆ ಪ್ರಶ್ನೆಯೇ ಮರೆತುಹೋಯಿತು. ಅಲ್ಲಿ ನೆರೆದಿದ್ದವರಿಗೂ ನಗುವೋ ನಗು. ಈ ವಿಡಿಯೋ ಇಲ್ಲಿದೆ ನೋಡಿ.