IND vs ENG: ಬೇಡ ಬೇಡ... ಮತ್ತೆ ಮೈದಾನದಲ್ಲಿ ಕೆಎಲ್ ರಾಹುಲ್ ಕನ್ನಡದ ಕಂಪು
ಕೆಎಲ್ ರಾಹುಲ್ ತಮ್ಮ ಜೊತೆಗಾರ ಆಟಗಾರರ ಜೊತೆ ಸ್ಥಳೀಯ ಭಾಷೆಗಳಲ್ಲೇ ಮಾತನಾಡುತ್ತಾ ಎಲ್ಲರ ಗಮನ ಸೆಳೆದಿದ್ದಾರೆ. ಇದಕ್ಕೆ ಮೊದಲು ಸಾಯಿ ಸುದರ್ಶನ್ ಜೊತೆ ತಮಿಳು, ಪ್ರಸಿದ್ಧ ಕೃಷ್ಣ ಜೊತೆ ಕನ್ನಡದಲ್ಲಿ ಮಾತನಾಡಿದ ವಿಡಿಯೋವನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಇನ್ ಸ್ಟಾಗ್ರಾಂ ಪುಟ ಪ್ರಕಟಿಸಿದೆ.
ಈಗ ಕರುಣ್ ನಾಯರ್ ಜೊತೆ ಕನ್ನಡದಲ್ಲೇ ಮಾತನಾಡಿದ್ದಾರೆ. ಸಾಮಾನ್ಯವಾಗಿ ಭಾರತೀಯ ಆಟಗಾರರು ಎದುರಾಳಿ ಆಟಗಾರರಿಗೆ ಪ್ಲ್ಯಾನ್ ಗೊತ್ತಾಗಬಾರದು ಎಂದು ಸ್ಥಳೀಯ ಭಾಷೆಗಳಲ್ಲಿ ಮಾತನಾಡುತ್ತಾರೆ. ಅದೇ ರೀತಿ ರಾಹುಲ್ ಕನ್ನಡಿಗ ಗೆಳೆಯ ಕರುಣ್ ಜೊತೆ ಕನ್ನಡದಲ್ಲೇ ಮಾತನಾಡಿದ್ದಾರೆ.
ಜೋಫ್ರಾ ಆರ್ಚರ್ ಬೌಲಿಂಗ್ ನಲ್ಲಿ ಚೆಂಡನ್ನು ತಳ್ಳಿದ ಕರುಣ್ ನಾಯರ್ ನಾನ್ ಸ್ಟ್ರೈಕರ್ ಎಂಡ್ ಕಡೆಗೆ ಓಡಿ ಬರುತ್ತಾರೆ. ಮತ್ತೊಂದು ರನ್ ಕದಿಯಲು ಓಡಲು ಸಿದ್ಧರಾದಾಗ ಸ್ಟ್ರೈಕರ್ ಎಂಡ್ ತಲುಪಿದ್ದ ರಾಹುಲ್ ಬೇಡ ಬೇಡ ಎಂದು ಕನ್ನಡದಲ್ಲೇ ಮಾತನಾಡಿ ತಡೆಯುತ್ತಾರೆ.