IND vs ENG ODI: ವಿರಾಟ್ ಕೊಹ್ಲಿ ಹೆಸರು ಹೇಳುತ್ತಿದ್ದಂತೇ ಕಟಕ್ ಪ್ರೇಕ್ಷಕರ ಹುಯಿಲು ನೋಡಿ: ವಿಡಿಯೋ

Krishnaveni K

ಭಾನುವಾರ, 9 ಫೆಬ್ರವರಿ 2025 (13:46 IST)
Photo Credit: X
ಕಟಕ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇಂದಿನ ಪಂದ್ಯಕ್ಕೆ ವಿರಾಟ್ ಕೊಹ್ಲಿ ಕಮ್ ಬ್ಯಾಕ್ ಮಾಡಲಿದ್ದಾರೆ ಎಂದಾಗ ಪ್ರೇಕ್ಷಕರ ಪ್ರತಿಕ್ರಿಯೆ ನೋಡಬೇಕಿತ್ತು.

ಮಂಡಿ ನೋವಿನಿಂದಾಗಿ ವಿರಾಟ್ ಕಳೆದ ಪಂದ್ಯವನ್ನು ಆಡಿರಲಿಲ್ಲ. ಈ ಪಂದ್ಯ ನಾಗ್ಪುರದಲ್ಲಿ ನಡೆದಿತ್ತು. ಭಾರತ ಭರ್ಜರಿಯಾಗಿ ಗೆದ್ದುಕೊಂಡು ಕಟಕ್ ನಲ್ಲಿ ಎರಡನೇ ಪಂದ್ಯವಾಡಲು ಬಂದಿದೆ. ಆದರೆ ಈ ಪಂದ್ಯಕ್ಕೆ ಕೊಹ್ಲಿ ಫಿಟ್ ಆಗಿದ್ದು ಆಡುವ ಬಳಗಕ್ಕೆ ಸೇರ್ಪಡೆಯಾಗಿದ್ದಾರೆ.

ಕೊಹ್ಲಿ ಇಂದಿನ ಪಂದ್ಯ ಆಡಲಿದ್ದಾರೆ ಎಂದು ರೋಹಿತ್ ಟಾಸ್ ವೇಳೆ ಘೋಷಿಸುತ್ತಿದ್ದಂತೇ ಖುಷಿಯಾದ ಕಟಕ್ ಪ್ರೇಕ್ಷಕರು ಭಾರೀ ಸಂಖ್ಯೆಯಲ್ಲಿ ಹುಯಿಲೆಬ್ಬಿಸಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿರಾಟ್ ಅಭ್ಯಾಸ ನಡೆಸುವಾಗಲೂ ಕಟಕ್ ನಲ್ಲಿ ಭಾರೀ ಸಂಖ್ಯೆಯಲ್ಲಿ ಬಂದಿದ್ದರು. ಇದು ಭಾರತದಲ್ಲಿ ವಿರಾಟ್ ಕೊಹ್ಲಿ ಮೇಲಿರುವ ಕ್ರೇಜ್ ಗೆ ಸಾಕ್ಷಿಯಾಗಿದೆ. ಆದರೆ ಅಭಿಮಾನಿಗಳ ನಿರೀಕ್ಷೆಗೆ ತಕ್ಕ ಹಾಗೆ ಅವರು ಇಂದು ರನ್ ಹೊಳೆ ಹರಿಸಿದರೆ ಪ್ರೇಕ್ಷಕರ ನಿರೀಕ್ಷೆಯೂ ಸುಳ್ಳಾಗದು.

THAT NOISE ????

Virat Kohli is announced back in the team and India go wild!

???? Watch #INDvENG on @tntsports & @discoveryplusUK pic.twitter.com/vZZEf3Blvf

— Cricket on TNT Sports (@cricketontnt) February 9, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ