ಮತ್ತದೇ ತಪ್ಪು ಮಾಡಿದ ವಿರಾಟ್ ಕೊಹ್ಲಿ: ಗೊತ್ತಿದ್ದೂ ಹೀಗ್ಯಾಕೆ ಮಾಡ್ತಿದ್ದಾರೆ ವಿರಾಟ್ ಕೊಹ್ಲಿ ವಿಡಿಯೋ

Krishnaveni K

ಶುಕ್ರವಾರ, 3 ಜನವರಿ 2025 (09:27 IST)
ಸಿಡ್ನಿ: ವಿರಾಟ್ ಕೊಹ್ಲಿಯಂತಹ ವಿಶ್ವ ಶ್ರೇಷ್ಠ ಕ್ರಿಕೆಟಿಗ ಮಾಡಿದ ತಪ್ಪನ್ನೇ ಮತ್ತೆ ಮಾಡುತ್ತಿದ್ದಾರೆ ಎಂದರೆ ಹೇಗೆ? ಇಂದೂ ಕೊಹ್ಲಿ ಮತ್ತೆ ಅದೇ ರೀತಿ ಆಫ್ ಸ್ಟಂಪ್ ಆಚೆ ಹೋಗುತ್ತಿದ್ದ ಬಾಲ್ ಕೆಣಕಿ ಔಟಾಗಿದ್ದು ಹೀಗ್ಯಾಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಎದುರಾಗಿದೆ.

ಆಸ್ಟ್ರೇಲಿಯಾ ವಿರುದ್ಧ ಐದನೇ ಟೆಸ್ಟ್ ನಲ್ಲೂ ಟೀಂ ಇಂಡಿಯಾ ಬ್ಯಾಟಿಂಗ್ ವೈಪಲ್ಯ ಮುಂದುವರಿದಿದೆ. ಇತ್ತೀಚೆಗಿನ ವರದಿ ಬಂದಾಗ 4 ವಿಕೆಟ್ ಕಳೆದುಕೊಂಡು 88 ರನ್ ಗಳಿಸಿದೆ. 69 ಎಸೆತ ಎದುರಿಸಿದ ವಿರಾಟ್ ಕೊಹ್ಲಿ ಮತ್ತೆ ಆಫ್ ಸ್ಟಂಪ್ ಆಚೆ ಹೋಗುತ್ತಿದ್ದ ಬಾಲ್ ಕೆಣಕಲು ಹೋಗಿ 17 ರನ್ ಗೆ ವಿಕೆಟ್ ಒಪ್ಪಿಸಿದ್ದಾರೆ.

ವಿರಾಟ್ ಕೊಹ್ಲಿಯಂತಹ ಅಪಾರ ಅನುಭವಿ, ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿರುವ ಬ್ಯಾಟಿಗನೇ ಈ ರೀತಿ ಮಾಡಿದರೆ ಉಳಿದವರ ಕತೆ ಏನು ಎಂಬ ಪ್ರಶ್ನೆ ಎದುರಾಗಿದೆ. ಈಗಾಗಲೇ ಕಳಪೆ ಫಾರ್ಮ್ ನಿಂದಾಗಿ ನಾಯಕ ರೋಹಿತ್ ಶರ್ಮಾ ತಂಡದಿಂದ ಡ್ರಾಪ್ ಆಗಿ ಅವಮಾನ ಅನುಭವಿಸಿದ್ದಾರೆ.

ವಿರಾಟ್ ಕೊಹ್ಲಿಗೂ ಅದೇ ರೀತಿ ಅವಮಾನ ಎದುರಿಸುವ ಪರಿಸ್ಥಿತಿ ಬಾರದಿರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಇನ್ನೊಂದೆಡೆ ರೋಹಿತ್ ಅಭಿಮಾನಿಗಳು ಗಂಭೀರ್ ಮೇಲೆ ಸಿಟ್ಟಾಗಿದ್ದಾರೆ. ಕೊಹ್ಲಿ ಕೂಡಾ ಕಳಪೆ ಫಾರ್ಮ್ ನಲ್ಲಿದ್ದಾರೆ. ಅವರ ಮೇಲೆ ಯಾಕೆ ಕ್ರಮ ಇಲ್ಲ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇಂದು ವಿರಾಟ್ ಕೊಹ್ಲಿ ಔಟಾದ ವಿಡಿಯೋ ಇಲ್ಲಿದೆ ನೋಡಿ.

Virat Kohli wicket. ????#INDvsAUS #AUSvIND #ViratKohli pic.twitter.com/mqCMNWMdA3

— Tanveer (@tanveermamdani) January 3, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ