ವಾಷಿಂಗ್ಟನ್ ಸುಂದರ್ ರನ್ನು ಇದ್ದಕ್ಕಿದ್ದಂತೆ ತಂಡಕ್ಕೆ ಕರೆಸಿಕೊಂಡಿದ್ದು ಕೋಚ್ ಗೌತಮ್ ಗಂಭೀರ್ ಎನ್ನಲಾಗಿದೆ. ಕಳೆದ ಪಂದ್ಯದಲ್ಲಿ ಕೆಎಲ್ ರಾಹುಲ್ ವೈಫಲ್ಯ, ಬ್ಯಾಟಿಂಗ್ ವೈಫಲ್ಯ ನೋಡಿದ ಮೇಲೆ ಗಂಭೀರ್ ತಂಡದಲ್ಲಿ ಆಲ್ ರೌಂಡರ್ ಒಬ್ಬರ ಅಗತ್ಯವಿದೆ ಎನಿಸಿತ್ತು.
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ ನಲ್ಲಿ 259 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರಮುಖ ಕಾರಣ ವಾಷಿಂಗ್ಟನ್ ಸುಂದರ್ ಬೌಲಿಂಗ್ ಕರಾಮತ್ತು. ಅವರು ಒಟ್ಟು 7 ವಿಕೆಟ್ ಕಬಳಿಸಿದರು. ಇದಕ್ಕೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅಕ್ಸರ್ ಪಟೇಲ್ ಡ್ರಿಂಕ್ಸ್ ಬ್ರೇಕ್ ವೇಳೆ ವಾಷಿಂಗ್ಟನ್ ಸುಂದರ್ ಅವರತ್ತ ದಿಟ್ಟಿಸಿ ನೋಡುವ ಫೋಟೋ ಹಾಕಿ ಅಂತೂ ನನ್ನ ಜಾಗ ಕಿತ್ಕೊಂಡ್ಯಲ್ಲಾ ಎಂದು ಹೇಳುತ್ತಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.