ಟೀಂ ಇಂಡಿಯಾ ಈಗಾಗಲೇ ಎರಡೂ ಟೆಸ್ಟ್ ಪಂದ್ಯಗಳನ್ನು ಸೋತು ಸರಣಿಯನ್ನು ಕಳೆದುಕೊಂಡಿದೆ. ಆದರೆ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ದೃಷ್ಟಿಯಿಂದ ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಜೊತೆಗೆ ವೈಟ್ ವಾಶ್ ಅವಮಾನವಾಗದಂತೆ ಗೆಲ್ಲುವ ಒತ್ತಡದಲ್ಲಿದೆ. ಈ ಪಂದ್ಯಕ್ಕೆ ಭಾರತ ಒಂದು ಬದಲಾವಣೆ ಮಾಡಿಕೊಂಡಿದೆ. ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದು ಮೊಹಮ್ಮದ್ ಸಿರಾಜ್ ಆಡುತ್ತಿದ್ದಾರೆ. ಉಳಿದಂತೆ ಯಾವುದೇ ಬದಲಾವಣೆಯಿಲ್ಲ.
ಉಳಿದಂತೆ ತಂಡ ಇಂತಿದೆ:
ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.
ನ್ಯೂಜಿಲೆಂಡ್: ಟಾಮ್ ಲಥಮ್ (ನಾಯಕ), ಡೆವನ್ ಕಾನ್ವೆ, ವಿಲ್ ಯಂಗ್, ರಚಿನ್ ರವೀಂದ್ರ, ಡೆರಿಲ್ ಮಿಚೆಲ್, ಟಾಮ್ ಬ್ಲಂಡರ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಇಶ್ ಸೋಧಿ, ಮ್ಯಾಟ್ ಹೆನ್ರಿ, ಅಜಾಝ್ ಪಟೇಲ್, ವಿಲಿಯಮ್ ಒರೂರ್ಕಿ.