IND vs NZ Test: ರೋಹಿತ್ ಶರ್ಮಾಗೊಂದು ರೂಲ್ಸ್, ಕೆಎಲ್ ರಾಹುಲ್ ಗೊಂದು ರೂಲ್ಸಾ

Krishnaveni K

ಶನಿವಾರ, 26 ಅಕ್ಟೋಬರ್ 2024 (12:17 IST)
ಪುಣೆ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಎರಡನೇ ಇನಿಂಗ್ಸ್ ನಲ್ಲೂ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿದ್ದಾರೆ.

ಮೊದಲ ಇನಿಂಗ್ಸ್ ನಲ್ಲಿ ರೋಹಿತ್ ಶೂನ್ಯಕ್ಕೆ ನಿರ್ಗಮಿಸಿದ್ದರು. ಎರಡನೇ ಇನಿಂಗ್ಸ್ ನಲ್ಲಾದರೂ ಉತ್ತಮ ಪ್ರದರ್ಶನ ನೀಡಬಹುದು ಎಂದು ಎಲ್ಲರ ನಿರೀಕ್ಷೆಯಾಗಿತ್ತು. ಇಂದು ಟೀಂ ಇಂಡಿಯಾಕ್ಕೆ ಅವರ ಇನಿಂಗ್ಸ್ ನ ಅಗತ್ಯವೂ ಇತ್ತು. ಆದರೆ ರೋಹಿತ್ ಮತ್ತೆ ವೈಫಲ್ಯ ಅನುಭವಿಸಿದ್ದಾರೆ.

ಇದರಿಂದ ಅಭಿಮಾನಿಗಳ ಸಿಟ್ಟು ಮಿತಿ ಮೀರಿದೆ. ಏನೂ ಮಾಡದೇ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವುದೆಂದರೆ ರೋಹಿತ್ ಶರ್ಮಾ ಎಂದು ಕೆಲವರು ಟಾಂಗ್ ಕೊಟ್ಟಿದ್ದಾರೆ. ರೋಹಿತ್ ನಾಯಕ ಎಂಬ ಕಾರಣಕ್ಕೆ ಮಾತ್ರ ಅವರಿಗೆ ಸ್ಥಾನ ದೊರೆಯುತ್ತಿದೆ. ಇದೇ ತಪ್ಪು ಕೆಎಲ್ ರಾಹುಲ್ ಮಾಡಿದ್ದಕ್ಕೆ ಅವರನ್ನು ತಂಡದಿಂದಲೇ ಕಿತ್ತು ಹಾಕಿಲ್ವಾ? ಈಗ ರೋಹಿತ್ ಕೂಡಾ ಆಡಿದ್ದು ಸಾಕು ಇನ್ನು ನಿವೃತ್ತಿಯಾಗಲಿ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.

ಭಾರತ ತಂಡಕ್ಕೆ ಈ ಪಂದ್ಯವನ್ನು ಗೆಲ್ಲಲು 359 ರನ್ ಗಳ ಬೆಟ್ಟದಂತಾ ಗುರಿಯಿದೆ. ಆದರೆ ಈಗಾಗಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿರುವ ಭಾರತ 82 ರನ್ ಗಳಿಸಿದೆ. ಯಶಸ್ವಿ ಜೈಸ್ವಾಲ್ 47, ಶುಬ್ಮನ್ ಗಿಲ್ 23 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ